ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ವಿಧಾನಸಭೆ ಸಮ್ಮತಿ: ಕೆಳಮನೆಯಲ್ಲಿ ವಿಧೇಯಕ ಅಂಗೀಕಾರ

sarvajna
Published on

ಬೆಂಗಳೂರು: ಸರ್ವಜ್ಞನ ಜನ್ಮಸ್ಥಳ ಸೇರಿ ಹಾವೇರಿ ಜಿಲ್ಲೆಯ ಹಿರೇಕೆರೂರು, ಅಬಲೂರು ಮತ್ತು ಮಾಸೂರು ಹಾಗೂ ಸುತ್ತಮುತ್ತ ಇರುವ ಸರ್ವಜ್ಞ ಕ್ಷೇತ್ರದ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪ್ರಾಧಿಕಾರ ಸ್ಥಾಪಿಸಲು ವಿಧಾನಸಭೆ ಸಮ್ಮತಿಸಿತು.

ಸೋಮವಾರ ಸದನದಲ್ಲಿ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ವಿಧೇಯಕ- 2020ಕ್ಕೆ ಅನುಮೋದನೆ ನೀಡಲಾಯಿತು. ಸರ್ವಜ್ಞ ಕರ್ನಾಟಕದ ಶ್ರೇಷ್ಠ ಪ್ರಾಚೀನ ಕವಿ ಮತ್ತು ಸಮಾಜ ಸುಧಾರಕರಾಗಿದ್ದರು. ಅವರು ಹಾವೇರಿ ಜಿಲ್ಲೆ ಅಬಲೂರಿನಲ್ಲಿ ಜನಿಸಿದರು. ಆದ್ದರಿಂದ ಸರ್ವಜ್ಞರ ಜನ್ಮಸ್ಥಳವನ್ನು ಒಳಗೊಂಡು ಹಿರೇಕೆರೂರಿನ ಸುತ್ತಮುತ್ತಲಿರುವ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಅಬಲೂರು ಮತ್ತು ಮಾಸೂರುಗಳ ಸರ್ವಜ್ಞ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಯಾತ್ರಾ ಮತ್ತು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಗೊಳಿಸಲು ಮತ್ತು ನಿರ್ವಹಣೆ ಮಾಡಲು ಪ್ರಾಧಿಕಾರ ಅವಶ್ಯ ಎಂಬ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮಂಡಿಸಲಾಗಿತ್ತು. ಪ್ರತಿಪಕ್ಷಗಳ ಗದ್ದಲ, ಗಲಾಟೆ, ಕೋಲಾಹಲ ನಡುವೆಯೇ ವಿಧೇಯಕಕ್ಕೆ ಸರ್ಕಾರ ಅಂಗೀಕಾರ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net