ಸಂಸ್ಕೃತಿ ಬಿಂಬಿಸುವ ಹುಬ್ಬಳ್ಳಿ ಗಣೇಶೋತ್ಸವ,  ನಿರ್ಣಾಯಕರ ತಂಡಕ್ಕೆ ಚಾಲನೆ ನೀಡಿದ ಮೂಜಗು

IMG-20250828-WA0011_1-2.jpg
Published on

ಹುಬ್ಬಳ್ಳಿ: ಇಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಬಹುಮಾನ ನಿರ್ಣಾಯಕರ ನಿಯೋಗದ ವಾಹನಕ್ಕೆ ಗುರುವಾರ ಹಸಿರು ನಿಶಾನೆ ತೋರಿಸಲಾಯಿತು.

ನಗರದಲ್ಲಿ ಪ್ರತಿಷ್ಠಾಪಿಸಿದ ಕಲಾತ್ಮಕ ಗಣಪತಿ ವಿಗ್ರಹಗಳು, ವೇದಿಕೆ ಕಲಾಕಾರರು, ಜಾನಪದ, ಸಾಂಸತಿಕ ಕಲಾವಿದರು, ವಿದ್ಯುತ್ ಅಲಂಕಾರ ಮಾಡಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ನಿಯೋಗ ರಚನೆ ಮಾಡಿದೆ.

ನಿಯೋಗಕ್ಕೆ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿ ಶುಭ ಕೋರಿದರು.

ನಮ್ಮ ಸಂಸ್ಕೃತಿ, ಕಲೆ, ಧರ್ಮ, ನುಡಿ, ನೆಲ, ಜಲ, ಮಂದಿರ, ಮಠಗಳನ್ನು ಪೂಜ್ಯನಿಯವಾಗಿ ಗೌರವಿಸುವುದರಿಂದ ನಮ್ಮ ಜೀವನ ಪರಿಪೂರ್ಣವಾಗುತ್ತದೆ. ಹುಬ್ಬಳ್ಳಿಯ ಗಣೇಶೋತ್ಸವವು ನಾಡಿನಾದ್ಯಂತ ಕಲೆಯಾಗಿ ಬಿಂಬಿತವಾಗುತ್ತಿದೆ ಎಂದು ಶ್ರೀಗಳು ಶ್ಲಾಘಿಸಿದರು.
ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿದರು.

ಉಪಾಧ್ಯಕ್ಷ ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಈರಣ್ಣ ಪಾಳೇದ, ಅಶೋಕ ಬೆಳ್ಳಿಗಟ್ಟಿ, ಮೋಹನ ಪತ್ತಾರ, ಮೌನೇಶ ಅರ್ಕಸಾಲಿ, ಹರೀಶ ಭರಾಡೆ, ಜಯಕುಮಾರ ಮುರಗೋಡ, ವಿಶ್ವನಾಥ ಹಿತ್ತಾಳಿ, ಬಸವರಾಜ ಸಜ್ಜನ, ಮೃತ್ಯುಂಜಯ ಕಮಡೊಳ್ಳಿಶೆಟ್ಟರ್, ಸಾಯಿನಾಥ ಹಿತ್ತಾಳಿ ಇತರರ ತಂಡವು ನಗರದ ಸಾರ್ವಜನಿಕ ಗಣೇಶೋತ್ಸವ ವೀಕ್ಷಣೆಗೆ ತೆರಳಿತು.

ಎಸ್.ಎಸ್. ಕಮಡೊಳ್ಳಿಶೆಟ್ಟರ್ ಸ್ವಾಗತಿಸಿದರು. ಸಿ.ಜಿ. ಧಾರವಾಡಶೆಟ್ಟರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net