ಹಾವೇರಿಯಲ್ಲಿ ಸರ್ವಜ್ಞ ಭವನ ನಿರ್ಮಾಣ

20-hvr-09
Published on

ವಿಜಯವಾಣಿ ಸುದ್ದಿಜಾಲ ಹಾವೇರಿ

ಜಿಲ್ಲಾ ಕೇಂದ್ರದಲ್ಲಿ ಶೀಘ್ರದಲ್ಲಿಯೇ ಸರ್ವಜ್ಞ ಸಭಾಭವನವನ್ನು ನಿರ್ವಿುಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ ಹೇಳಿದರು.

ನಗರದ ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕುಂಬಾರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ವಜ್ಞರ ತ್ರಿಪದಿ ಪದ್ಯಗಳು ಸಮಾಜದಲ್ಲಿನ ಜಾತಿ, ಭೇದ, ಮೇಲು ಕೀಳು ಭಾವನೆಯನ್ನು ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ ಎಂದರು.

ಧಾರವಾಡ ತಾಲೂಕಿನ ಕರಡಿಗುಡ್ಡ ಸರ್ಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ನಂದೀಶ ಕಾಖಂಡಿ ಉಪನ್ಯಾಸ ನೀಡಿ, ಸರ್ವಜ್ಞರ ತ್ರಿಪದಿಗಳು ಕನ್ನಡದಲ್ಲಿ ದಾಖಲಾಗಿರುವುದು ಕೇವಲ 1 ಸಾವಿರ ಮಾತ್ರ. ಆದರೆ, ಸರ್ವಜ್ಞರು ರಚಿಸಿರುವ ಒಟ್ಟು ತ್ರಿಪದಿಗಳ ಸಂಖ್ಯೆ 7,070. ಇವುಗಳನ್ನು ಕನ್ನಡದಲ್ಲಿ ದಾಖಲಿಸುವ ಕಾರ್ಯವಾಗಬೇಕಾಗಿದೆ. ಸರ್ವಜ್ಞರು ಗುರುವಿನ ಶ್ರೇಷ್ಠತೆಯನ್ನು ಜಗತ್ತಿಗೆ ತಿಳಿಸುವಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳದ ವಿಷಯವಿಲ್ಲ. ಪ್ರತಿಯೊಂದು ವಿಷಯದಲ್ಲೂ ಅವರ ತ್ರಿಪದಿಗಳು ಅನ್ವಯವಾಗುತ್ತವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಉಪತಸೀಲ್ದಾರ್ ಪಿ.ಎಸ್. ಕುಂಬಾರ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ರೇವಣ್ಣಾ ಚಕ್ರಸಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net