ಸರ್ವಧರ್ಮ ಗೌರವಿಸುವ ಪರಂಪರೆ ನಮ್ಮದು

4..3
ನಾಗರಾಳ ಗ್ರಾಮದ ಬಸಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಬಸವಪ್ರಸಾದ ಜೊಲ್ಲೆ ಭೂಮಿಪೂಜೆ ನೆರವೇರಿಸಿದರು. ರಾಯಪ್ಪ ಗೊಂಡೆ, ಅಪ್ಪಾಸಾಬ ಕೆಂಗನ್ನವರ ಇತರರು ಇದ್ದರು.
Published on

ರಾಯಬಾಗ: ಜಗತ್ತಿನಲ್ಲಿಯೇ ಉನ್ನತ ಸಂಸ್ಕೃತಿ ಹೊಂದಿರುವ ನಮ್ಮ ದೇಶ ಸರ್ವಧರ್ಮ ಗೌರವಿಸುವ ಪರಂಪರೆ ಹೊಂದಿದೆ ಎಂದು ಜೊಲ್ಲೆ ಉದ್ಯೋಗ ಸಮೂಹದ ಯುವ ಉದ್ಯಮಿ ಬಸವಪ್ರಸಾದ ಜೊಲ್ಲೆ ಹೇಳಿದರು.

ತಾಲೂಕಿನ ನಾಗರಾಳ ಗ್ರಾಮದ ಬಸಲಿಂಗೇಶ್ವರ ದೇವಸ್ಥಾನಕ್ಕೆ 2022-23ನೇ ಸಾಲಿನ ಮುಜರಾಯಿ ಇಲಾಖೆಯಿಂದ ಮಂಜೂರಾದ 10 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ (ಕಲ್ಯಾಣ ಮಂಟಪ) ನಿರ್ಮಾನಕ್ಕೆ ಈಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಹಣಕಾಸು ಮಂಜೂರು ಮಾಡಿಸಿದ್ದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಪೇವರ್ಸ್, ಹೈಟೆಕ್ ಶೌಚಗೃಹ ಮತ್ತು ಬ್ರಿಡ್ಜ್ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಬಸಲಿಂಗೇಶ್ವರ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ರಾಯಪ್ಪ ಗೊಂಡೆ, ಅಪ್ಪಾಸಾಬ ಕೆಂಗನ್ನವರ, ಬಸಲಿಂಗ ಕಿಲ್ಲೇದಾರ, ಅಜಿತ ಪಾಟೀಲ, ಧರಿಗೌಡ ಪಾಟೀಲ, ಅರ್ಜುನ ವ್ಯಾಪಾರೆ, ಕಲಗೌಡ ಪಾಟೀಲ, ಕೃಷ್ಣ ಪಾಟೀಲ, ಬಾಳಗೌಡ ಪಾಟೀಲ, ಲಕ್ಷ್ಮಣ ಮಗದುಮ್ಮ, ಬಸಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net