

ಹೊಸಪೇಟೆ: ನಗರದ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಿಂದ ಮಂಗಳವಾರ ಸಂಜೆ ಸಾವಿರಾರು ಭಕ್ತ ಸಮೂಹದ ಸಮ್ಮುಖದಲ್ಲಿ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ಸಂಭ್ರಮ, ಸಡಗರದಿಂದ ನೆರವೇರಿತು.
ಶ್ರೀಮಠದ ಹತ್ತೊಂಬತ್ತನೇ ಜಗದ್ಗುರುಗಳಾದ ಲಿಂ, ಪೂಜಶ್ರಿ ಡಾ.ಸಂಗನಬಸವ ಸಾನ್ನಿಧ್ಯದಲ್ಲಿ ಕುದರೆಮೋತಿಯ ಶ್ರೀ ಜಗದ್ಗುರು ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಜಗದ್ಗುರು ವಿಜಯ ಮಹಾಂತ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಮಠದಿಂದ ಆರಂಭಗೊಂಡ ಮಹಾರಥೋತ್ಸವ ಪಾದಗಟ್ಟೆ ಆಂಜನೇಯ ದೇವಸ್ಥಾನದ ವರೆಗೆ ಸಾಗಿದ ಬಳಕ ತನ್ನ ಮೂಲ ಸ್ಥಾನಕ್ಕೆ ಮರಳುವ ಮೂಲಕ ರಥೋತ್ಸವ ಸಂಪನ್ನಗೊAಡಿತು.
ಸಿದ್ದಲಿAಗ ಮಹಾಸ್ವಾಮಿಗಳು, ಗುರುಬಸವ ಮಹಾಸ್ವಾಮಿಗಳು, ಪ್ರಭುನೀಲಕಂಠ ಮಹಾಸ್ವಾಮಿಗಳು, ಶಿವಲಿಂಗ ಮಹಾಸ್ವಾಮಿಗಳು, ಸದಾಶಿವ ಮಹಾಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ತೋಂಟದಾರ್ಯ ಮಹಾಸ್ವಾಮಿಗಳು, ನಿರಂಜನ ದೇವರು, ಶಿವ ಬಸವ ದೇವರು ಸೇರಿದಂತೆ ಸ್ಥಳೀಯ ಗಣ್ಯರು ಪಾಲ್ಗೊಂಡಿದ್ದರು.
ಜಾನಪದ ಗೀತ ಸಂಭ್ರಮ:
ಅದಕ್ಕೂ ಮುನ್ನ ಜಗದ್ಗುರು ಶ್ರೀ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾನಪದ ಗೀತ ಸಂಭ್ರಮ ಕಾರ್ಯಕ್ರಮದದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಜ.ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಪಾಲಕರು ಅರಿವು ಮೂಡಿಸಬೇಕು. ಮಠ ಮಾನ್ಯಗಳಿಂದ ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ ನೇತೃತ್ವದ ಕಲಾತಂಡ ನಡೆಸಿಕೊಟ್ಟ ಜಾನಪದ ಗೀತ ಸಂಭ್ರಮ ನೆರೆದವರನ್ನು ಆಕರ್ಷಿಸಿತು.
ಮರಿಯಮ್ಮನ ಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಪ್ರಮುಖರಾದ ಕೆ.ಕೊಟ್ರೇಶ್, ರಾಜಶೇಖರ ಹಿಟ್ನಾಳ್, ವಿಶ್ವನಾಥ ಹಿರೇಮಠ, ಭೂಪಾಳ ರಾಘವೇಂದ್ರ ಶೆಟ್ಟಿ, ಕೆ.ಎಂ.ಹೇಮಯ್ಯ ಸ್ವಾಮಿ, ಮಧುರಚೆನ್ನ ಶಾಸ್ತಿç, ಅಸುಂಡಿ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.