ಸರ್ವ ಸದಸ್ಯರ ಮಹಾ ಅಧಿವೇಶನ 5ರಿಂದ

Published on

ಸಿಂಧನೂರು: ತುಮಕೂರಿನ ಎಂಪ್ರೆಸ್ ಆಡಿಟೋರಿಯಂನಲ್ಲಿ ಅ.5 ಮತ್ತು 6ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆಂದು ಸಮಿತಿ ಜಿಲ್ಲಾ ಸಂಚಾಲಕ ಚಿನ್ನಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ದಲಿತ ಚಳವಳಿ ಕರ್ನಾಟಕದ ಜನ ಚಳವಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಅಂಬೇಡ್ಕರ್ ವಿಚಾರಧಾರೆಗಳನ್ನು ಜನಾಂದೋಲನವಾಗಿ ರೂಪಿಸುವ ಅನಿವಾರ್ಯ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಸರ್ವ ಸದಸ್ಯರ ಮಹಾಧಿವೇಶನ ನಡೆಸಲಾಗುತ್ತಿದೆ. ಜಿಲ್ಲೆಯಿಂದ 350 ಜನರ ಪಾಲ್ಗೊಳ್ಳಲಿದ್ದಾರೆ ಎಂದರು. ಜಿಲ್ಲಾ ಸಂಚಾಲಕ ಶಿವರಾಜ ಬಾಗಲವಾಡ, ಭಾಸ್ಕರ್, ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net