ಸರೋಜ್ ಮಧುಕಲಾ ಉತ್ಸವ ಸಮಾರೋಪ

mng-25nov-s m kushe
Published on


ಮಂಗಳೂರು : ನಗರದ ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ಜರಗಿದ ಸರೋಜ್ ಮಧುಕಲಾ ಉತ್ಸವದ ಸಮಾರೋಪ ಸಮಾರಂಭ ಶಾಲಾ ಸಂಸ್ಥಾಪಕಿ ಸರೋಜಿನಿ ಮಧುಸೂದನ ಕುಶೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಐಸಿಎಐ ಮಂಗಳೂರು ಇದರ ಮಾಜಿ ಅಧ್ಯಕ್ಷ ಸಿಎ ಎಸ್.ಎಸ್.ನಾಯಕ್ ಮಾತನಾಡಿ ‘
ಮಕ್ಕಳಿಗೆ ಅಭಿರುಚಿ ಇರುವ ಕ್ಷೇತ್ರದಲ್ಲೇ ಅವರಿಗೆ ಪ್ರೋತ್ಸಾಹ ನೀಡಬೇಕು. ಕೇವಲ ಅಂಕಗಳಿಸುವುದೇ ಜೀವನದ
ಗುರಿಯಾಗಿರಬಾರದು. ನಮ್ಮಲ್ಲಿ ಇರುವ ಪ್ರತಿಭೆಗಳಿಂದಲೇ ಜೀವನದಲ್ಲಿ ಯಶಸ್ಸು ಗಳಿಸಬಹುದು. ಸಮಯವನ್ನು ವ್ಯರ್ಥ ಮಾಡದೆ ನಿರಂತರ ಪ್ರಯತ್ನದ ಮೂಲಕ ಜೀವನದ ಗುರಿಯನ್ನು ಸಾಧಿಸಬಹುದು ಎಂದರು.
ರಂಗಭೂಮಿ ಕಲಾವಿದ ಪ್ರದೀಪ್‌ಚಂದ್ರ ಕುತ್ಪಾಡಿ ಮಾತನಾಡಿ ‘ ಇಂದಿನ ಕಾಲಘಟ್ಟದಲ್ಲಿ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂಬ ಅಭಿಲಾಷೆಯನ್ನು ಹೊಂದಿರುವ ಕುಶೆ ಸಂಸ್ಥೆಯ ಸಾಧನೆ ಅಮೋಘವಾದುದು ಎಂದರು.
ಶಾಲೆಯ ಟ್ರಸ್ಟಿ ವಸಂತಿ ಹೊಸಬೆಟ್ಕರ್, ಪಿವಿಎಸ್ ಸಮೂಹ ಸಂಸ್ಥೆಯ ಮ್ಯಾನೇಜರ್ ಸಂದೇಶ್, ಅಧಿಕಾರಿ ರಾಜಾರಾಮ್ ನಾಟೇಕರ್, ಲೆಕ್ಕ ಪರಿಶೋಧಕ ರಾಮುಲ್ ನಾಯ್ಡು, ವಕೀಲ ಮಣಿರಾಜ್, ಕಾಲೇಜಿನ ಆಡಳಿತಾಧಿಕಾರಿ ಮುರಳೀಧರ ರಾವ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ರಂಜಿತ, ಉಪ ಕಾರ್ಯದರ್ಶಿ ಪ್ರಶಾಂತಿ ಎಸ್, ಉಪ ಪ್ರಾಂಶುಪಾಲೆ ಪವಿತ್ರ, ಸಹ ಮುಖ್ಯ ಶಿಕ್ಷಕಿ ಸೌಜನ್ಯ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಬಿಂದುಸಾರ ಶೆಟ್ಟಿ ಸ್ವಾಗತಿಸಿ, ರೇಷ್ಮಾ ಮೋಹನ್ ವಂದಿಸಿದರು. ಕಾಲೇಜಿನ ಉಪನ್ಯಾಸಕಿ
ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net