ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಸವಾಲುಗಳನ್ನು ಎದುರಿಸಿ: ಮಾಜಿ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ ಕಿವಿಮಾತು

Clg)
Published on

ಮಂಡ್ಯ: ಇಂದಿನ ಕಾಲೇಜು ವಿದ್ಯಾರ್ಥಿಸಮೂಹ ಸವಾಲುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಸಾಧನೆ ಮಾಡಬೇಕಿದೆ ಎಂದು ಮಾಜಿ ಎಂಎಲ್ಸಿ ಶ್ರೀಕಂಠೇಗೌಡ ಹೇಳಿದರು.

ನಗರದ ಅರ್ಕೇಶ್ವರ ಬಡಾವಣೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಜೀವನ ಹಂತದಲ್ಲಿರುವ ಕಾಲೇಜು ವಿದ್ಯಾರ್ಥಿನಿಯರು ಸಾಕಷ್ಟು ಸವಾಲುಗಳನ್ನು ಎದುರಿಸಿ, ಆತ್ಮವಿಶ್ವಾಸದಿಂದ ಸಾಧಕರಾಗಿ ಬೆಳೆಯಬೇಕಿದೆ. ನಿಮ್ಮ ಮುಂದೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ ಎಂದು ಕಿವಿಮಾತೇಳಿದರು.

ಮಾಜಿ ರಾಷ್ಟ್ರಪತಿ ಅಬ್ದುಲ್‌ಕಲಾಂ ಅವರು ಅನೇಕ ಮಾರ್ಗದರ್ಶಕ, ಸ್ಪೂರ್ತಿದಾಯಕ ಮಾತುಗಳನ್ನು ಹೇಳಿರುವಂತೆ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಆ ಕನಸುಗಳನ್ನು ಸಾಕಾರಗೊಳಿಸಲು ಶತಪ್ರಯತ್ನಸಿ, ಸಾಧನೆ ನಿಮ್ಮದಾಗುತ್ತದೆ, ಜಗತ್ತು ನಿಮ್ಮತ್ತ ತಿರುಗಿ ನೋಡುತ್ತದೆ ಎಂದಿರುವುದನ್ನು ಮರೆಯಬಾರದು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಪ್ರತಿಭಾವಂತರಾಗಿರುತ್ತಾರೆ, ಅವಕಾಶಗಳು ಮತ್ತು ಆದ್ಯತೆಗಳನ್ನು ಬಳಸಿಕೊಳ್ಳಬೇಕಿದೆ, ಉಜ್ವಲ ಭವಿಷ್ಯ ನಿರ್ಮಾಣ ನಿಮ್ಮ ಕೈಯಲ್ಲಿದೆ, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಗುರಿ ತಲುಪುವ ಕೌಶಲತೆ ನಿಮ್ಮದಾಗಲಿ ಎಂದು ನುಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಉಮೇಶ್, ಪಾಂಶುಪಾಲ ಹನುಮಂತಯ್ಯ, ಎಂ.ಜೆ.ಲೋಕೇಶ್,  ವಿಸ್ಮಿತಾ, ಸ್ಫೂರ್ತಿ, ಕೆ.ಪಿ.ಮೃತ್ಯುಂಜಯ, ಡಾ.ಮನು, ಅನುಪಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net