

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಅತ್ಯವಶ್ಯಕವಾಗಿದೆ ಎಂದು ಸರ್ಜಾಪುರ ಲಯನ್ಸ್ ಕ್ಲಬ್‌ನ ಮುಖ್ಯಸ್ಥೆ ಪೂಜಾ ಚಂದ್ರ ತಿಳಿಸಿದರು.
ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಸ್ಪೋಟ್ಸ್ ಜೋನ್ ಪ್ಲಸ್ ಆವರಣದಲ್ಲಿ ಸರ್ಜಾಪುರ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಿಕ್ಸ್ ಆನ್ ಗ್ರಾಸ್ ಎಂಬಾ ಫುಟ್ಬಾಲ್ ಪಂದ್ಯಾವಳಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಮಾನಸಿಕ ಒತ್ತಡಕ್ಕೆ ಬಲಿಯಾಗುತ್ತಿದ್ದಾರೆ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಲು ಸಾಧ್ಯತೆ. ಹೀಗಾಗಿ ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗಿಯಾಗಬೇಕು ಎಂದರು.
ಬಾಲ್ಯವಸ್ಥೆಯಲ್ಲೇ ಪ್ರತಿದಿನ 1 ಗಂಟೆ ವ್ಯಾಯಾಮ, ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಕ್ರಿಕೆಟ್, ಕಬಡ್ಡಿ ಮತ್ತು ವಾಲಿಬಾಲ್, ಫುಟ್ಬಾಲ್‌ನಂತಹ ಗುಂಪು ಆಟಗಳಲ್ಲಿ ಭಾಗವಹಿಸುವುದರಿಂದ ಸಹೋದರತ್ವ ಮತ್ತು ಸೌಹಾರ್ದ ಭಾವಗಳು ಮೂಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸರ್ಜಾಪುರ ಲಯನ್ ಕ್ಲಬ್ ಅಧ್ಯಕ್ಷರಾದ ರೂಪೇಶ್ ಚಂದ್ರ, ಪದಾಧಿಕಾರಿಗಳಾದ ಲಯನ್ ಸುಪರ್ಣ ಚಟರ್ಜಿ, ಲಯನ್ ದೀಪಾ ಜಾಕೋಬ್, ಲಯನ್ ಸುದೀಪ್ ಸೇನ್, ಲಯನ್ ದೀಪಾ ಸಂಗೀತಾ, ಲಯನ್ ಅನುಷಾ ಮತ್ತು ಲಯನ್ಸ್ ಕ್ಲಬ್‌ನ ಪದಾದಿಕಾರಿಗಳು ಇದ್ದರು.