

ಲಿಂಗಸುಗೂರು: ತಾಲೂಕಿನ ಸರ್ಜಾಪುರ ಗ್ರಾಮದ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹೆಚ್ಚುವರಿ 40 ರೂ. ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ದಸಂಸ (ಭೀಮವಾದ) ಸಂಘಟನೆ ಮುಖಂಡರು ಮಂಗಳವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ತೊಗರಿ ಕೇಂದ್ರದ ಏಜೆಂಟ್ ವೀರೇಶ ಯರಡೋಣಗೆ 40 ರೂ. ವಸೂಲಿ ಮಾಡುವ ಕುರಿತು ವಿಚಾರಿಸಿದರೆ ಯಾರಿಗೆ ಬೇಕಾದರೂ ದೂರು ಕೊಡಿ ಎನ್ನುತ್ತಿದ್ದಾರೆ. ಸರ್ಕಾರದ ನಿಯಮಾನುಸಾರ ತೊಗರಿ ಖರೀದಿಸುವ ಜತೆಗೆ ಏಜೆಂಟ್ ವಿರುದ್ಧ ಕ್ರಮ ಕೈಗೊಂಡು ರೈತರಿಂದ ವಸೂಲಿ ಮಾಡಿದ ಹಣ ಹಿಂದಿರುಗಿಸಬೇಕೆಂದು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಚಾಲಕ ಯಂಕಪ್ಪ ಚಿತ್ತಾಪುರ, ತಾಲೂಕು ಸಂಚಾಲಕ ಯಮನಪ್ಪ ಸರ್ಜಾಪುರ, ನಾಗರಾಜ ಹಾಲಬಾವಿ, ಸಿದ್ದಪ್ಪ, ಗುಂಡಪ್ಪ, ಶಿವನಗೌಡ, ಹುಚ್ಚರೆಡ್ಡಿ ರಾಮಲಿಂಗ, ನಾಗರಾಜ, ಯಂಕಣ್ಣ, ಬಸವರಾಜ ಇದ್ದರು.