ಸರ್ಜನ್ ಅರುಣಕುಮಾರಗೆ ವೈದ್ಯಶ್ರೀ ಪ್ರಶಸ್ತಿ

BKL DR. ARUNKUMAR
Published on

ಭಟ್ಕಳ: ರಾಜ್ಯ ಸರ್ಕಾರ ನೀಡುವ ವೈದ್ಯಶ್ರೀ ಪ್ರಶಸ್ತಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಸರ್ಜನ್ ಅರುಣಕುಮಾರ ಭಾಜನರಾಗಿದ್ದಾರೆ.

ಉಡುಪಿ ಜಿಲ್ಲೆ ಬ್ರಹ್ಮಾವರ ಮೂಲದ ಡಾ. ಅರುಣಕುಮಾರ 2009ರಲ್ಲಿ ವೈದ್ಯರಾಗಿ ನೇಮಕಗೊಂಡಿದ್ದರು. 15 ವರ್ಷಗಳಿಂದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಬರುವ ಬಡ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸಿಗದ ಔಷಧ, ಸಲಕರಣೆಗಳನ್ನು ಹೊರಗಿನಿಂದ ತಮ್ಮ ವೆಚ್ಚದಲ್ಲೇ ತರಿಸಿ ಚಿಕಿತ್ಸೆ ನೀಡಿದ ಅನೇಕ ಉದಾಹರಣೆಗಳಿವೆ. ಮಂಗಳೂರು, ಉಡುಪಿಯ ಆಸ್ಪತ್ರೆಗಳಲ್ಲಿ ‘ಕಷ್ಟ’ ಎಂದು ಅಭಿಪ್ರಾಯಪಡಲಾದ ರೋಗಿಗಳಿಗೂ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಪ್ರಾಣ ಉಳಿಸಿದ್ದಾರೆ. ಮೃದು ಸ್ವಭಾವದ ಅರುಣಕುಮಾರ, ಸಮಯ ನಿಗದಿಪಡಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುವವರಲ್ಲ. ಇವರ ಪ್ರಾಮಾಣಿಕ ಕರ್ತವ್ಯವನ್ನು ಗುರುತಿಸಿ ಆರೋಗ್ಯ ಇಲಾಖೆಯು ಅರುಣಕುಮಾರ ಅವರನ್ನು ರಾಜ್ಯ ಮಟ್ಟದ ವೈದ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net