ಅತಿಯಾದ ಇಯರ್‌ಫೋನ್ ಬಳಕೆಯಿಂದ ಕಿವುಡುತನ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಆತಂಕ

mandya
Published on

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಇಯರ್‌ಫೋನ್‌ಗಳ ಅತಿಯಾದ ಬಳಕೆಯಿಂದ ಕಿವುಡುತನ ಕಾಣಿಸಿಕೊಳ್ಳುತ್ತಿದೆ. ಇನ್ನು ಇಂತಹ ಸಮಸ್ಯೆ ಹದಿಹರೆಯದವರ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ರಾಷ್ಟ್ರೀಯ ಶ್ರವಣದೋಷ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮ ಯೋಜನೆಯಡಿ ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ 4509 ಜನರು ಶ್ರವಣದೋಷವುಳ್ಳವರಿದ್ದಾರೆ. ವಿಶ್ವದಲ್ಲಿ 466 ದಶಲಕ್ಷಕ್ಕೂ ಹೆಚ್ಚು ಜನರು ಕುಂದಿದ ಶ್ರವಣಶಕ್ತಿಯೊಂದಿಗೆ ಬದುಕುತ್ತಿದ್ದಾರೆ. 2050ರ ಹೊತ್ತಿಗೆ 10 ಜನರಲ್ಲಿ ಒಬ್ಬರು ಶ್ರವಣ ಶಕ್ತಿವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸೂಕ್ತ ಚಿಕಿತ್ಸೆಯಿಂದ ಕಿವುಡುತನ ಹೋಗಲಾಡಿಸಬಹುದು ಎಂದರು.

ಜಿಲ್ಲೆಯಲ್ಲಿ 6 ವರ್ಷದೊಳಗಿನ ಶ್ರವಣದೊಷವುಳ್ಳ ಮಕ್ಕಳನ್ನು ಪತ್ತೆಮಾಡಿ ಮಾತು ಮತ್ತು ಶ್ರವಣ ತರಬೇತಿಗೆ ಒಳಪಡಿಸಿ ಹೆಚ್ಚಿನ ಚಿಕಿತ್ಸೆಗೆ ಕ್ಲಾಕಿಯರ್ ಇಂಫ್ಲಾಂಟ್ ಶಸ್ತಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 28 ಮಕ್ಕಳನ್ನು ಗುರುತಿಸಲಾಗಿದೆ. ಈಗಾಗಲೇ 12 ಮಕ್ಕಳಿಗೆ ಶಸ್ತಚಿಕಿತ್ಸೆ ಆಗಿದೆ. ಮಿಮ್ಸ್‌ನ ಇಎನ್‌ಟಿ ವಿಭಾಗದಲ್ಲಿ ಶಸ್ತಚಿಕಿತ್ಸೆ ಮತ್ತು ತರಬೇತಿ ನಡೆಯುತ್ತಿದೆ ಎಂದು ಹೇಳಿದರು.

ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಭವಾನಿಶಂಕರ್, ಡಿಇಐಸಿ ವ್ಯವಸ್ಥಾಪಕ ವಿನೋಧಿನಿ, ಮರಿಸ್ವಾಮಿ, ಲೋಕೇಶ್, ನೇಹಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net