ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ

web 1
Published on

ಕಡೂರು: ಬರದ ನಾಡಿಗೆ ವರವಾಗಿ ದೊರೆತ ಶಾಶ್ವತ ನೀರಾವರಿ ಯೋಜನೆಯಲ್ಲಿ ಅನವಶ್ಯಕವಾಗಿ ಹುಳುಕು ಹುಡುಕುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ ಎಂದು ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಹೇಳಿದರು.

ತಾಲೂಕಿನ ಕೆರೆಗಳಿಗೆ ನೀರು ಹಂಚಿಕೆಯಲ್ಲಿ ಮೋಸವಾಗಿದೆ ಎಂದು ಆಪಾದಿಸಿರುವ ಜಿಪಂ ಸದಸ್ಯ ಶರತ್​ಕೃಷ್ಣಮೂರ್ತಿ ಆರೋಪದಲ್ಲಿ ಹುರುಳಿಲ್ಲ. ತಾಲೂಕಿನ 114 ಕೆರೆಗಳನ್ನು ಗುರುತಿಸಿ ಶೇ.50 ನೀರು ತುಂಬಿಸಲು ಅನುಮೋದನೆ ದೊರೆತಿದೆ. ಉತ್ತಮ ಮಳೆಯಾದರೆ ಕೆರೆಗಳನ್ನು ಪೂರ್ಣ ತುಂಬಿಸಲು ಅವಕಾಶವಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನ ಕೆರೆಗಳಿಗೆ ನೀರು ತುಂಬಿಸವುದು ಈ ಹಿಂದಿನ ಶಾಸಕರ ಕನಸಾದರೂ ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಬೆಳ್ಳಿ ಪ್ರಕಾಶ್, ತರೀಕೆರೆ ಶಾಸಕ ಡಿ.ಎಸ್.ಸುರೇಶ್, ಸಂಸದರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಪ್ರಾಮಾಣಿಕ ಪ್ರಯತ್ನದಿಂದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಕರೊನಾ ಸಂಕಷ್ಟದ ನಡುವೆಯೂ ನೀರಾವರಿಗಾಗಿ 1,281.80 ಕೋಟಿ ರೂ. ತಂದಿರುವುದು ಶಾಸಕರಿಗೆ ಕ್ಷೇತ್ರದ ಜನರ ಮೇಲಿರುವ ಕಾಳಜಿ ತೋರಿಸುತ್ತದೆ. ಈ ಹಿಂದೆ ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಯೋಜನೆ ಶ್ರಮಿಸಿರುವುದರಿಂದ ಅವರು ಸೂಚಿಸಿದ ಹೆಸರನ್ನು ನಾಮಕರಣ ಮಾಡಬೇಕು ಎಂದಿಲ್ಲ. ಸರ್ಕಾರ ಯೋಜನೆಗೆ ಸೂಕ್ತ ಹೆಸರನ್ನು ಇರಿಸಬಹುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net