ಶರತ್ ದೊಡ್ಡರಸಿನಕೆರೆ ಗ್ರಾ.ಪಂ. ಅಧ್ಯಕ್ಷ

ದೊಡ್ಡರಸಿನಕೆರೆ ಗ್ರಾಮ ಪಂಚಾಯಿತಿ
ದೊಡ್ಡರಸಿನಕೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಡಿ.ಎಸ್.ಶರತ್ ಅವರನ್ನು ಸದಸ್ಯರು, ಗ್ರಾಮದ ಮುಖಂಡರು ಅಭಿನಂದಿಸಿದರು. ಡಿ.ಎ.ರಘು, ಯತೀಶ್, ಸುರೇಶ, ಚಂದ್ರಶೇಖರ್, ದೇವರಹಳ್ಳಿ ರಘು ಇದ್ದರು.
Published on

ಕೆ.ಎಂ.ದೊಡ್ಡಿ: ಸಮೀಪದ ದೊಡ್ಡರಸಿನಕೆರೆ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಡಿ.ಎಸ್.ಶರತ್ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಕುರಿಕೆಂಪನದೊಡ್ಡಿ ಶಿವಲಿಂಗಯ್ಯ ಅವರು ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ.ಎಸ್. ಶರತ್ ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಪ್ರಶಾಂತ್ ಅವಿರೋಧ ಆಯ್ಕೆ ಘೋಷಿಸಿದರು. ಬಳಿಕ ನೂತನ ಅಧ್ಯಕ್ಷರನ್ನು ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಅಭಿನಂದಿಸಿದರು.

ಅಧ್ಯಕ್ಷ ಡಿ.ಎಸ್.ಶರತ್ ಮಾತನಾಡಿ, ಗ್ರಾಮದ ಎಳ್ಗೆಗೆ ದಿ.ಮಂಚೇಗೌಡರು ಕಾರಣವಾಗಿದ್ದು, ಗ್ರಾಮ ಪಂಚಾಯಿತಿ, ಸೊಸೈಟಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಆಶೀರ್ವಾದದೊಂದಿಗೆ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಜೆಡಿಎಸ್ ಯುವ ಮುಖಂಡ ಡಿ.ಟಿ. ಸಂತೋಷ್ ಅವರ ಆಣತಿಯಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಡಿ.ಎ.ರಘು, ಯತೀಶ್, ಸುರೇಶ, ಚಂದ್ರಶೇಖರ್, ದೇವರಹಳ್ಳಿ ರಘು, ಧನು ಮಂಚೇಗೌಡ, ದಿವ್ಯಾ, ಸುನೀತಾ, ಸಮೀನಾ ಬಾನು ರಘು, ಕಲಾವತಿ, ಶ್ರೀನಿವಾಸ್,ಪುಟ್ಟಸ್ವಾಮಿ, ಕೃಪಾ, ಭಾಗ್ಯಾ, ಶೇಖರ್, ಸೌಮ್ಯಾ ಸವಿತಾ, ಹರ್ಷಿತಾ, ಲತಾ, ಹೊನ್ನೇಗೌಡ, ಜ್ಯೋತಿ, ಶಿವಲಿಂಗಯ್ಯ, ಮುಖಂಡರಾದ ಕರಡಕೆರೆ ಹನುಮಂತೇಗೌಡ, ಎಂ.ಚಿಕ್ಕಹುಚ್ಚೇಗೌಡ, ಅರವಿಂದ್, ರಾಮಕೃಷ್ಣ, ಡಿ.ಸಿ.ಶಿವರಾಮ, ಕೇಬಲ್ ಆನಂದ, ಶಿವಣ್ಣ, ಶಂಕರ್, ಆನಂದ, ಶ್ರೀಧರ್, ಜಯರಾಮು, ಚನ್ನೇಗೌಡ, ಮಹೇಶ್, ಸಂದೀಪ್, ಪುರುಷೋತ್ತಮ್, ಪ್ರದೀಪ್ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net