‘ಕೆಮೆರ್ಜನ್ಸ’ನಲ್ಲಿ ಸರಸ್ವತಿ ಪದವಿಪೂರ್ವ ಕಾಲೇಜ್ ಸಾಧನೆ

Saraswati Undergraduate College's performance in 'Kemerjansa'
ರಸಾಯನಶಾಸ್ತ್ರದ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಿಜೇತರಾದ ವಿಧಾತ್ರಿ ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು.
Published on

ಕುಮಟಾ: ಇಲ್ಲಿನ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳು ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜ್‌ನಲ್ಲಿ ಇತ್ತೀಚಿಗೆ ರಸಾಯನಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ರಾಷ್ಟೀಯ ಮಟ್ಟದ ‘ಕೆಮೆರ್ಜನ್ಸ -2025’ರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.

ರಸಾಯನ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಸಂಗೀತ ಸ್ಪರ್ಧೆ ಕೆಮ್-ಮ್ಯೂಸಿಕ್‌ನಲ್ಲಿ ಶ್ರೇಯಾ, ಮಾನಸಾ, ಸ್ನೇಹಾ, ಸೃಜನಾ ಹಾಗೂ ಅನುಶ್ರೀ ಉತ್ತಮ ಗಾಯನ ಪ್ರಸ್ತುತಪಡಿಸಿ ಪ್ರಥಮ ಸ್ಥಾನ ಗಳಿಸಿದರು. ಶ್ರೀಲಕ್ಷ್ಮಿ, ಪೂರ್ವಿ, ಸಂಕಲ್ಪ, ಶರಣ್ಯ ಹಾಗೂ ಶ್ರೇಯಾ ಫ್ಯಾಷನ್ ಶೋ ಸ್ಪರ್ಧೆ ಲ್ಯುಮಿನಸೆನ್ಸ ನಲ್ಲಿ ದ್ವಿತೀಯ ಸ್ಥಾನ ಗಳಿಸಿದರು.

ತರಬೇತುಗೊಳಿಸಿದ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಸನ್ನ ಹೆಗಡೆ ಹಾಗೂ ವಿಷಯ ಉಪನ್ಯಾಸಕರ ಪ್ರಯತ್ನ ಹಾಗೂ ವಿಜೇತ ವಿದ್ಯಾರ್ಥಿಗಳ ಸಾಧನೆಗೆ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net