ಮೈಸೂರು ಅರಮನೆಯಲ್ಲಿ ಸರಸ್ವತಿ ಪೂಜೆ

saraswathi pooje
Published on

ಮೈಸೂರು: ನವರಾತ್ರಿ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿಪೂಜೆ ನೆರವೇರಿಸಿದರು.

ಅರಮನೆಯಲ್ಲಿ ಬೆಳಗ್ಗೆ 10.05 ರಿಂದ 10.35ರ ಅವಧಿಯಲ್ಲಿ ತಾಳೆಗರಿ, ವಿವಿಧ ಗ್ರಂಥಗಳು, ವೀಣೆ, ತಬಲ ಸೇರಿದಂತೆ ಇನ್ನಿತರ ಪರಿಕರಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಯಿತು. ನವರಾತ್ರಿ ಸಂದರ್ಭದಲ್ಲಿ ಸರಸ್ವತಿ ಪೂಜೆ ಮಾಡುವುದು ಒಂದು ಸಂಪ್ರದಾಯವಾಗಿದ್ದು, ಅರಮನೆಯ ಪುರೋಹಿತರ ಸಮ್ಮುಖದಲ್ಲಿ, ವೇದ ಮಂತ್ರಗಳ ಉದ್ಘೋಷದೊಂದಿಗೆ ಪೂಜೆ ಮಾಡಲಾಯಿತು.
ಈ ಸಂದರ್ಭ ಯದುವೀರ್ ಪುತ್ರ ಆದ್ಯವೀರ್ ಒಡೆಯರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net