

ಮಮದಾಪುರ: ಸಮೀಪದ ಕೊಳವಿ ಗ್ರಾಮದ ಅಡವಿಸಿದ್ದೇಶ್ವರ ಶರಣರ 29ನೇ ವರ್ಷದ ಮಹಾಪೂಜೆ ಗೂಳಿ ಬಸವೇಶ್ವರ ದೇವಸ್ಥಾನದಲ್ಲಿ ಆ.21ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ. ಅಂಕಲಗಿ ಮಠದ ಅಮರ ಸಿದ್ದೇಶ್ವರ ಶ್ರೀ, ತವಗಮಠದ ಸಿದ್ದಲಿಂಗಯ್ಯ ಶ್ರೀ, ಅಜ್ಜಯ್ಯ ಶ್ರೀ, ಹೂಲಿಕಟ್ಟಿ ಶಿವಲಿಂಗೇಶ್ವರ ಮಠದ ಕುಮಾರ ಶ್ರೀ, ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ಶ್ರೀ, ಸ್ಥಳಿಯ ಬಸಯ್ಯ ಹುಲಕಂತಿ ಸ್ವಾಮೀಜಿ, ಸಂಗಯ್ಯ ಹುಲಕಂತಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.