ಸಾರಕ್ಕಿ ಕೆರೆ ಒತ್ತುವರಿ ತೆರವು

bbmp lake
Published on

ಬೆಂಗಳೂರು: ಬೊಮ್ಮನಹಳ್ಳಿ ವಲಯದ ಸಾರಕ್ಕಿ ಕೆರೆಗೆ ಸೇರಿರುವ 21.68 ಗುಂಟೆ ಒತ್ತುವರಿಯಾಗಿದ್ದ ಪ್ರದೇಶವನ್ನು ತೆರವುಗೊಳಿಸಿ ಪಾಲಿಕೆ ತನ್ನ ಸುಪರ್ದಿಗೆ ಪಡೆದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವು ಸಂಬಂಧ ಸರ್ವೆ ಹಾಗೂ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಭಾಗವಾಗಿ ಸಾರಕ್ಕಿ ಕೆರೆಗೆ ಸೇರಿರುವ ಜರಗನಹಳ್ಳಿ ಸರ್ವೆ ನಂ.7ರಲ್ಲಿ 21.68 ಗುಂಟೆ ಶೆಡ್, ಖಾಲಿ ಜಾಗ ಹಾಗೂ ರಸ್ತೆಗೆ ಅತಿಕ್ರಮಿಸಿದ್ದ ಪ್ರದೇಶವವನ್ನು ಒತ್ತುವರಿದಾರರನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಒತ್ತುವರಿ ಪ್ರಕರಣದಲ್ಲಿ ತೆರವುಗೊಳಿಸಿದ ಜಾಗಕ್ಕೆ ತಂತಿ ಬೇಲಿ ಅಳವಡಿಸಿ ಭ್ರಪಡಿಸಲಾಗಿದೆ. ಈ ಜಾಗದ ಮಾರುಕಟ್ಟೆ ಮೌಲ್ಯವು ಅಂದಾಜು 20 ಕೋಟಿ ರೂ. ಆಗಿದೆ. ಸಾರಕ್ಕಿ ಕೆರೆಗೆ ಸಂಬಂಧಿಸಿದಂತೆ ಇನ್ನೂ ಕೆಲ ಒತ್ತುವರಿ ಪ್ರಕರಣಗಳಿದ್ದು, ನ್ಯಾಯಾಲಯದ ತೀರ್ಪು ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ತೆರವುಗೊಳಿಸುವ ಮುನ್ನ ಒತ್ತುವರಿದಾರರಿಗೆ ನೋಟಿಸ್ ನೀಡಿಯೇ ಕಾರ್ಯಾಚರಣೆ ಕೈಗೊಳ್ಳುವ ಕ್ರಮ ಅನುಸರಿಸಲಾಗುತ್ತಿದೆ ಎಂದು ಬಿಬಿಎಂಪಿಯ ಕೆರೆ ವಿಭಾಗದ ಕಾರ್ಯಪಾಲಕ ಅಭಿಯಂತರ ದೀಪಶ್ರೀ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net