ಮೌಲ್ಯವರ್ಧನೆಗೆ ರಂಗಭೂಮಿ ಕೊಡುಗೆ ಅಪಾರ

17 SARAG 1
filter: 0; fileterIntensity: 0.000000; filterMask: 0; captureOrientation: 0; shaking: 0.090569; highlight: 1; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 34;
Published on

 ಸಿನಿಮಾ ನಟ ಸುಂದರ್ ಶ್ಲಾಘನೆ

ಸರಗೂರು: ನೈತಿಕ ಮೌಲ್ಯವರ್ಧನೆಗೆ, ಸಂಸ್ಕೃತಿ ಪಾಲನೆಗೆ ರಂಗ ಕಲೆಗಳು ವಿಶೇಷವಾದ ಕೊಡುಗೆಗಳನ್ನು ನೀಡಬಲ್ಲವು ಎಂದು ಸಿನಿಮಾ ನಟ ಸುಂದರ್ ಹೇಳಿದರು.ಪಟ್ಟಣದ ಶಿವರಾತ್ರೀಶ್ವರ ಶಿವಾನುಭವ ಮಂಟಪದಲ್ಲಿ ಜೆಎಸ್‌ಎಸ್ ವಿದ್ಯಾಪೀಠ ಮಂಗಳವಾರ ಆಯೋಜಿಸಿದ್ದ ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು. ಪ್ರೇಕ್ಷಕರನ್ನು ರಂಜಿಸುವ ಸಂಭ್ರಮಾಚರಣೆ ಮತ್ತು ಉತ್ಸವಗಳು ನಮ್ಮ ನೆಲದ ಪರಂಪರೆಯ ಪ್ರತೀಕವಾಗಿವೆ. ಭಾರತದ ರಂಗಭೂಮಿಯ ತೇಜಸ್ಸು, ಹಿರಿಮೆ ಬಹಳ ದೊಡ್ಡದು. ನಮ್ಮಲ್ಲಿರುವ ಕಲಾವಿದರೇ ಇದಕ್ಕೆ ಸಾಕ್ಷಿಎಂದರು. ಸಂಕೀರ್ಣವಾದ ವೇಷಭೂಷಣಗಳಿಂದ ಹಿಡಿದು ಮೋಡಿ ಮಾಡುವ ಪ್ರದರ್ಶನಗಳವರೆಗೆ, ಪ್ರತಿಯೊಂದು ವಿವರಗಳನ್ನೂ ರಂಗ ಸಂಸ್ಕೃತಿ ನಮಗೆ ನೀಡಿದೆ. ಈ ಕ್ಷೇತ್ರದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಕಲೆ ಜೀವಂತವಾಗಿರಿಸಲು ಕಲಾವಿದರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಕೊಡುಗೆ ದೊಡ್ಡದು: ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಧಾ ಮಾತನಾಡಿ, ರಂಗಭೂಮಿಯು ಕ್ರಿಯಾತ್ಮಕ ಸಾಂಸ್ಕೃತಿಕ ವೇದಿಕೆಯಾಗಿ ತಮ್ಮದೇ ಆದ ಕೊಡುಗೆಯನ್ನು ನಾಡಿಗೆ ನೀಡಿದೆ ಎಂದರು. ಸ್ಥಳೀಯ ರಂಗ ಚಟುವಟಿಕೆಗಳು ವೃತ್ತಿಪರರ ನಡುವೆ ಸೌಹಾರ್ದ ಸಂಬಂಧಗಳನ್ನು, ಸ್ಥಳೀಯರಲ್ಲಿ ವಿಚಾರಗಳ ವಿನಿಮಯ ಮತ್ತು ಅನುಭವಗಳ ಸಮ್ಮಿಲನವನ್ನು ಉತ್ತೇಜಿಸುತ್ತವೆ ಎಂದರು. ಗ್ರಾಮೀಣ ಭಾಗದಲ್ಲಿ ರಂಗಕಲೆಗಳು ಇನ್ನೂ ಜೀವಂತವಾಗಿ ಇವೆ. ಮಕ್ಕಳು ಹೆಚ್ಚಾಗಿ ಟಿವಿ ಮತ್ತು ಮೊಬೈಲ್ ಫೋನ್ ಗೀಳಿಗೆ ಅಂಟಿಕೊಂಡಿದ್ದಾರೆ. ಅವರಿಗೆ ಸೂಕ್ತ ರಂಗಭೂಮಿ ಚಟುವಟಿಕೆ ಮಾಡಿಸಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ರಂಗ ಕಲೆಗಳು ಉಳಿಯಲು ಸಾಧ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರಶೇಖರ್, ಸಾಹಿತಿ ಮತ್ತು ಕಲಾವಿದರು ಕಷ್ಟಗಳಿಂದ ದೂರವಾಗಿ ಸಂತೃಪ್ತಿಯಿಂದ ಜೀವನ ನಡೆಸಬೇಕು. ಆಗ ಮಾತ್ರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿರಲು ಸಾಧ್ಯ ಎಂದರು. ಕಲಾವಿದರಿಗೆ ಯಾವುದೇ ಖಚಿತ ಆದಾಯ ಇರುವುದಿಲ್ಲ. ಈ ಸ್ಥಿತಿಯನ್ನು ಅರ್ಥಮಾಡಿಕೊಂಡು ನಾವೆಲ್ಲರೂ ರಂಗಭೂಮಿ ಮತ್ತು ಕಲಾವಿದರನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. .

ಪ್ರದರ್ಶನ: ಎಸ್‌ಜೆ ಸಿಇ ಕ್ಯಾಂಪಸ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ‘ಮಾಧ್ಯಮ ವ್ಯಾಯೋಗ’ ನಾಟಕ ಪ್ರದರ್ಶಿಸಿದರು. ಪಪಂ ಅಧ್ಯಕ್ಷೆ ರಾಧಿಕಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ವೀರಭದ್ರಪ್ಪ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಭಕ್ತ ಬಳಗದ ಗೌರವಾಧ್ಯಕ್ಷ ದಡದಹಳ್ಳಿ ಶಿವರಾಜು, ಜೆಎಸ್‌ಎಸ್ ಶಾಲೆ ಮುಖ್ಯ ಶಿಕ್ಷಕ ಅಂಜುಂಪಾಷ, ಕಾಲೇಜು ಪ್ರಾಂಶುಪಾಲ ಮಹದೇವಸ್ವಾಮಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ ಮೂರ್ತಿ, ಶಿಕ್ಷಕರಾದ ಶಿವಪ್ರಸಾದ್, ನಂದಿನಿ, ಶೀಲಾ, ಶ್ವೇತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net