ಸಾರಾ ಅಬೂಬಕ್ಕರ್ ನಿಧನದಿಂದ ಅಪಾರ ನಷ್ಟ: ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಹೇಳಿಕೆ

12_01_Mdy_02(Kasapa)
Published on

ಮಂಡ್ಯ: ಮಹಿಳಾ ಸಂವೇದನೆಯ ಪ್ರಖರ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿದ್ದ ಸಾರಾ ಅಬೂಬಕ್ಕರ್ ಅವರ ನಿಧನ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಕೆ.ಆರ್.ಪೇಟೆ ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಭವನದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಮಾತನಾಡಿ, ಕಥೆ, ಕಾದಂಬರಿ, ನಾಟಕ ಸೇರಿದಂತೆ ಹತ್ತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅವರ ಬರಹಗಳು ಶೈಕ್ಷಣಿಕ ಪಠ್ಯಗಳೂ ಆಗಿವೆ. ಅದರಲ್ಲೂ ಇವರ ಚಂದ್ರಗಿರಿ ತೀರದಲ್ಲಿ ಕಾದಂಬರಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಸಹನಾ, ವಜ್ರಗಳು, ಸುಳಿಯಲಿ ಸಿಕ್ಕವರು, ಇಳಿಜಾರು, ಚಪ್ಪಲಿಗಳು, ಖೆಡ್ಡ, ಗಗನ ಸಖಿ ಇವರ ಮಹತ್ವದ ಕೃತಿಗಳಾಗಿವೆ. ಅನೇಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದರು. ಸಣ್ಣವಯಸ್ಸಿನಲ್ಲೇ ಬರೆಯುವುದಕ್ಕೆ ಶುರು ಮಾಡಿದರು. ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಕಾರ್ಯದರ್ಶಿಗಳಾದ ಹುಸ್ಕೂರು ಕೃಷ್ಣೇಗೌಡ, ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಮಂಜು ಮುತ್ತೇಗೆರೆ, ಚೇತನ್‌ಕುಮಾರ್, ಉಮಾಶಂಕರ್, ಮಂಜು ಬಲ್ಲೇನಹಳ್ಳಿ, ಬಸವೇಗೌಡ ಖರಡ್ಯ, ಪ್ರಕಾಶ್ ಮೇನಾಗರ, ಮಂಜುನಾಥ್, ಕ್ರಾಂತಿಸಿಂಹ, ಸುಜಾತಾಕೃಷ್ಣ, ಭಾಸ್ಕರ್, ಕೊತ್ತತ್ತಿರಾಜು, ಗಾಮನಹಳ್ಳಿ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net