ಮಂದಾರ್ತಿ ದೇವಳದಲ್ಲಿ ಸಪ್ತಪದಿ ತುಳಿದ 16 ಜೋಡಿ

sapthapathi new
Published on

ಮಂದಾರ್ತಿ: ಧಾರ್ಮಿಕ ದತ್ತಿ ಇಲಾಖೆ ಹಾಗೂ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ವತಿಯಿಂದ ಸಾಮೂಹಿಕ ವಿವಾಹ (ಸಪ್ತಪದಿ) ಮಂದಾರ್ತಿ ದೇವಸ್ಥಾನದಲ್ಲಿ ಗುರುವಾರ ನಡೆದಿದು,್ದ 16 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ದೇವಸ್ಥಾನ ವತಿಯಿಂದ ವರನಿಗೆ ಐದು ಸಾವಿರ, ವಧುವಿಗೆ ಹತ್ತು ಸಾವಿರ ರೂ. ಮತ್ತು 40,000ರೂ. ಮೌಲ್ಯದ ಮಂಗಲಸೂತ್ರ ನೀಡಲಾಯಿತು. ಆನುವಂಶಿಕ ಆಡಳಿತ ಮೊಕ್ತೇಸರ ಎಚ್.ಧನಂಜಯ್ ಶೆಟ್ಟಿ, ಆನುವಂಶಿಕ ಮೊಕ್ತೇಸರರಾದ ಎಚ್.ಸುರೇಂದ್ರ ಶೆಟ್ಟಿ, ಎಚ್.ಪ್ರಭಾಕರ ಶೆಟ್ಟಿ, ಎಚ್.ಶಂಭು ಶೆಟ್ಟಿ, ಎಚ್.ಶ್ರೀನಿವಾಸ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ಉದ್ಯಮಿ ಎಚ್.ವಿಠಲ ಶೆಟ್ಟಿ ಶೇಡಿಕೊಡ್ಲು, ಅರ್ಚಕ ಎಂ.ಶ್ರೀಪತಿ ಅಡಿಗ, ಗಣೇಶ್ ಭಟ್, ಅರ್ಚಕ ವೃಂದ ಹಾಗೂ ದೇವಸ್ಥಾನದ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net