

ವಿಟ್ಲ: ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಸಪ್ತ ಜುವೆಲ್ಸ್‌ನಲ್ಲಿ ವರ್ಷಾಚರಣೆ ಸಂಭ್ರಮ ಆರಂಭವಾಗಿದ್ದು, ಸಂಸ್ಥೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ಜೂ.೧೦ರಂದು ಕೊನೆಗೊಳ್ಳಲಿದೆ.
ಮಳಿಗೆಯಲ್ಲಿ ಆಭರಣ ಖರೀದಿಸಿದ ಗ್ರಾಹಕರಿಗೆ ಅಷ್ಟೇ ತೂಕದ ಬೆಳ್ಳಿಯ ನಾಣ್ಯಗಳನ್ನು ಸಂಸ್ಥೆ ನೀಡುತ್ತಿದೆ. ಪ್ರತಿ ಬೆಳ್ಳಿ ಸಾಮಗ್ರಿ/ ಆಭರಣ ಖರೀದಿಗೆ ಶೇ.೫ರಿಂದ ೧೦ ರಿಯಾಯಿತಿ ದೊರೆಯಲಿದೆ. ವಿವಿಧ ವಿನ್ಯಾಸದ ಚಿನ್ನಾಭರಣಗಳು, ವಿನೂತನ ಶೈಲಿಯ ಚಿನ್ನಾಭರಣಗಳು, ವಿವಿಧ ವಿನ್ಯಾಸದ ಪೆಂಡೆಂಟ್, ಬೆಳ್ಳಿಯ ಆಭರಣಗಳು, ಬೆಳ್ಳಿಯ ಆರ್ಟ್ ವರ್ಕ್‌ಗಳೂ ಲಭ್ಯವಿದೆ. ಸಂಸ್ಥೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ.
ಬೆಳ್ಳಿನಾಣ್ಯ ಉಚಿತ:
’ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತೀ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತೀ ವರ್ಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು ೫೦೦ ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ. ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಆಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ದತಿಯಲ್ಲಿ ಬೋನಸ್ ಲಭಿಸಲಿದೆ. ಸಂಸ್ಥೆಯ ಉದ್ಘಾಟನಾ ಸಂದರ್ಭ ಸಪ್ತ ಅಕ್ಷಯ ಯೋಜನೆಗೆ ಸೇರ್ಪಡೆಗೊಳ್ಳುವ ಗ್ರಾಹಕರಿಗೆ ಬೆಳ್ಳಿನಾಣ್ಯ ಉಚಿತವಾಗಿ ದೊರೆಯಲಿದೆ.
ಸಪ್ತ ಜುವೆಲ್ಸ್‌ನ ವಿಶೇಷತೆಗಳು: ಉತ್ಕೃಷ್ಟ ಆಭರಣಗಳು ವಿಶ್ವಸನೀಯ ಬೆಲೆಯಲ್ಲಿ ದೊರೆಯುವ ಸಂಸ್ಥೆ ಇದಾಗಿದೆ. ಗ್ರಾಹಕರ ಆಭರಣಗಳ ವಿನ್ಯಾಸದ ಆಯ್ಕೆಗೆ ವಿಶೇಷ ಸಹಕಾರ ನೀಡಲಾಗುತ್ತಿದೆ ಮಾತ್ರವಲ್ಲದೆ ಪ್ರತಿಯೊಂದೂ ಆಭರಣಗಳ ತಯಾರಿಕೆ ಸಂದರ್ಭ ವಿಶೇಷ ಕಾಳಜಿ ವಹಿಸಲಾಗುತ್ತದೆ. ಎಲ್ಲ ವರ್ಗದ ಹಾಗೂ ಎಲ್ಲಾ ಪೀಳಿಗೆಯ ಜನರ ಮನಸ್ಸಿಗೆ ಒಪ್ಪುವಂತಹ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಇದೊಂದು ೯೧೬ ಶುದ್ಧತೆ ಎಚ್‌ಯುಐಡಿ ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳ ಮಾರಾಟ ಮಳಿಗೆಯಾಗಿದೆ.
ವಿವಿಧ ರೀತಿಯ ಗಿಫ್ಟ್ ಐಟಂಗಳು:
ಮದುವೆ, ಗೃಹಪ್ರವೇಶ ಸಹಿತ ಶುಭಸಮಾರಂಭಗಳಿಗೆ ತಮ್ಮವರಿಗಾಗಿ ಗಿಫ್ಟ್ ನೀಡಬಹುದಾದ ಸಿಲ್ವರ್ ಫಾಯಿಲ್ ಕಲೆಕ್ಷನ್ ನ ಪ್ರೇಮ್‌ಗಳು, ಪ್ರೈಮಾ ಆರ್ಟ್ ಮತ್ತು ಆರ್ಯ ಆರ್ಟ್‌ನ ಬ್ರಾಂಡೆಡ್ ಗೋಲ್ಡ್ ಗಿಫ್ಟ್ ಫಾಯಿಲ್ ಕಲೆಕ್ಷನ್‌ಗಳು. ವಿವಿಧ ವಿನ್ಯಾಸ ಹಾಗು ದರಗಳ ಸಿಲ್ವರ್ ಫಾಯಿಲ್ ಫ್ರೇಮ್‌ಗಳು. ವಿವಿಧ ತೂಕ ಹಾಗೂ ವಿನ್ಯಾಸದ ಸಿಲ್ವರ್ ಕಾಯಿನ್‌ಗಳು ಲಭ್ಯವಿದ್ದು, ಈ ಕಲೆಕ್ಷನ್ ಗಳು ಮತ್ತಷ್ಟು ಗ್ರಾಹಕರ ಮನಸೂರೆಗೊಳಿಸಿದೆ.
ಸಪ್ತ ವೆಂಚರ್ಸ್ ಬಗ್ಗೆ….:
ಕೆಲ ಉತ್ಸಾಹಿ ಸ್ನೇಹಿತರು ಸೇರಿಕೊಂಡು ನಿರ್ದಿಷ್ಟ ಗುರಿ ಇಟ್ಟುಕೊಂಡು ಪಾಲುದಾರಿಕೆಯಲ್ಲಿ ಸಪ್ತ ವೆಂಚರ್ಸ್ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ ೨೦೧೪ರಲ್ಲಿ ಪೇರಮೊಗರಿನಲ್ಲಿ ಸಪ್ತ ಫುಡ್ ಪ್ರಾಡಕ್ಟ್ ನ್ನು ಆರಂಭಿಸಿದರು. ಇಲ್ಲಿ ಚಪಾತಿ, ಪೂರಿ, ಪರೋಟ, ಅಕ್ಕಿರೊಟ್ಟಿ, ಕಡ್ಲೆಬೇಳೆ ಹೋಳಿಗೆ, ಕಾಯಿಹೋಳಿಗೆ, ಗೋದಿಹಲ್ವಾ, ನೇಂದ್ರ ಬಾಳೆಹಣ್ಣಿನ ಹಲ್ವಾ ಮೊದಲಾದ ಆಹಾರೋತ್ಪಾದನೆ ಆರಂಭಿಸಲಾಯಿತು. ಎಫ್ ಎಸ್. ಎಸ್. ಐ ಪ್ರಮಾಣೀಕೃತ ಟೆಕ್ನಾಲಜಿಯನ್ನು ಬಳಿಸಿ ಉತ್ಕೃಷ್ಟ ಗುಣಮಟ್ಟದ ಆಹಾರೋತ್ಪಾದನೆಯಲ್ಲಿ ತೊಡಗಿಕೊಂಡ ಸಂಸ್ಥೆ ಅತ್ಯಲ್ಪ ಸಮಯದಲ್ಲೇ ಪ್ರಸಿದ್ಧಿ ಪಡೆಯಿತು. ಕ್ಲಪ್ತ ಸಮಯದ ಸೇವೆ ಹಾಗೂ ವಸ್ತುವಿನ ಗುಣಮಟ್ಟ ಇವರ ಉತ್ಪನ್ನಗಳನ್ನು ಜನರು ಕೊಳ್ಳುವಂತೆ ಮಾಡಿತ್ತು. ಚಿನ್ನಾಭರಣಗಳ ಬಗ್ಗೆ ಅನುಭವ ಪಡೆದುಕೊಂಡ ಪಾಲುದಾರರು ಗ್ರಾಮೀಣ ಭಾಗದ ಜನರಿಗೆ ಮನಸಿಗೊಪ್ಪುವ ಆಭರಣಗಳನ್ನು ವಿಶ್ವಾಸನೀಯ ಬೆಲೆಯಲ್ಲಿ ನೀಡಬೇಕೆನ್ನುವ ನಿಟ್ಟಿನಲ್ಲಿ ೨೦೧೭ರಲ್ಲಿ ವಿಟ್ಲದ ಎಂಪಾಯರ್ ಮಹಲ್‌ನಲ್ಲಿ ಸಪ್ತ ಜ್ಯುವೆಲ್ಸ್ ಅನ್ನುವ ಚಿನ್ನಾಭರಣ ಮಳಿಗೆಯನ್ನು ಹುಟ್ಟು ಹಾಕಿದ್ದರು. ಇದು ಕೂಡ ಅತ್ಯಲ್ಪ ಸಮಯದಲ್ಲೇ ಈ ಭಾಗದ ಜನರ ಮನ ಗೆಲ್ಲುವಲ್ಲಿ ಸಫಲವಾಯಿತು. ಆ ಬಳಿಕ ವರುಷಗಳ ಹಿಂದೆ ವಿಟ್ಲದ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಸಂಸ್ಥೆಯು ಸ್ಥಳಾಂತರಗೊಂಡಿದ್ದು, ಇದೀಗ ಅಲ್ಲಿ ಎರಡನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದೆ.
ವಿಸ್ತಾರವಾದ ಪಾರ್ಕಿಂಗ್:
ಗ್ರಾಮೀಣ ಭಾಗದಿಂದ ವಾಹನಗಳ ಮೂಲಕ ಸಂಸ್ಥೆಗೆ ಆಗಮಿಸುತ್ತಿರುವ ಗ್ರಾಹಕರು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ, ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವಿಶಾಲ ಪಾರ್ಕಿಂಗ್ ಸೌಲಭ್ಯವಿದೆ. ಇದು ಚಿನ್ನಾಭರಣ ಖರೀದಿಗೆ ಬರುವ ಗ್ರಾಹಕರಿಗೆ ಮತ್ತಷ್ಟು ಸುಲಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೭೦೯೦೦ ೪೯೭೭೭ಯನ್ನು ಸಂಪರ್ಕಿಸಬಹುದಾಗಿದೆ.