15ರವರೆಗೆ ಮೆಗಾ ಮಾನ್ಸೂನ್‌ ಎಕ್ಸ್‌ಚೇಂಜ್‌ ಆಫರ್‌ SAPTA

ಸಪ್ತ ಜುವೆಲ್ಸ್‌ ಮಾನ್ಸೂನ್‌ ಎಕ್ಸ್‌ಚೇಂಜ್‌ ಆಫರ್‌ ಪ್ರಯೋಜನ ಪಡೆದುಕೊಳ್ಳುತ್ತಿರುವ ಗ್ರಾಹಕರು.
ಸಪ್ತ ಜುವೆಲ್ಸ್‌ ಮಾನ್ಸೂನ್‌ ಎಕ್ಸ್‌ಚೇಂಜ್‌ ಆಫರ್‌ ಪ್ರಯೋಜನ ಪಡೆದುಕೊಳ್ಳುತ್ತಿರುವ ಗ್ರಾಹಕರು.
Published on

ಪ್ರಮುಖ ಮುಖ್ಯಾಂಶಗಳು

  • ಸಪ್ತ ಜುವೆಲ್ಸ್‌ನಲ್ಲಿ ಗ್ರಾಹಕರಿಗೆ ವಿಶೇಷ ಅವಕಾಶ
ವಿಟ್ಲ: ಇಲ್ಲಿನ ಮುಖ್ಯ ರಸ್ತೆಯ ಸ್ಮಾರ್ಟ್‌ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಸಪ್ತ ಜುವೆಲ್ಸ್‌ ಗ್ರಾಹಕರಿಗೆ ಮೆಗಾ ಮಾನ್ಸೂನ್‌ ಎಕ್ಸ್‌ಚೇಂಜ್‌ ಆಫರ್‌ ನೀಡಿದ್ದು, ಉತ್ತಮ ಸ್ಪಂದನೆ ಹಾಗೂ ಗ್ರಾಹಕರ ಅಪೇಕ್ಷೆಯಂತೆ ಜು.15ರವರೆಗೆ ವಿಸ್ತರಿಸಿದೆ.
ಸಪ್ತ ಮಳೆಗಾಲದ ವಿಶೇಷ ರಿಯಾಯಿತಿಯನ್ನು ಜೂ.1ರಿಂದ 30ರವರೆಗೆ ನೀಡಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ಲಭಿಸಿತ್ತು. ಎಲ್ಲರ ಅಪೇಕ್ಷೆಯಂತೆ ಆಫರ್‌ ಅನ್ನು 15 ದಿನಗಳ ಕಾಲ ವಿಸ್ತರಣೆ ಮಾಡುವ ಮೂಲಕ ಇನ್ನಷ್ಟು ಗ್ರಾಹಕರು ಪ್ರಯೋಜನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ದೇಶದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು, ಗ್ರಾಹಕರ ಹೊಸ ಚಿನ್ನಾಭರಣದ ಕನಸನ್ನು ನನಸಾಗಿಸಲು ಹೊಸ ಚಿನ್ನಾಭರಣಗಳನ್ನು ಪ್ರಚಲಿತ 916 ಎಚ್‌.ಯು.ಐ.ಡಿ. ಮಾರ್ಕ್‌ನ ಆಭರಣವಾಗಿ ಪರಿವರ್ತಿಸಲು ವಿಶೇಷ ಆಫರ್‌ ನೀಡಲಾಗಿದೆ.
ಮಾನ್ಸೂನ್‌ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಗ್ರಾಹಕರಿಗೆ 916 ಅಲ್ಲದ ಚಿನ್ನಾಭರಣಗಳ ಮೇಲೆ ಪ್ರತಿ 10 ಗ್ರಾಂಗೆ 2500 ರೂ. ಹೆಚ್ಚುವರಿ ಮೌಲ್ಯಮಾಪನ ನೀಡಲಾಗಿತ್ತು. ಹಳೆಯ ಚಿನ್ನಾಭರಣದ ಶುದ್ಧತೆಯನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಉಚಿತವಾಗಿ ಖಚಿತಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net