ಸಪ್ತ ಜ್ಯುವೆಲ್ಸ್ ಹಬ್ಬದ ಸಡಗರ - ೩೦ರವರೆಗೆ ಖರೀದಿಗೆ ವಿಶೇಷ ಯೋಜನೆ - ಗಣೇಶನಿಗೆ ಬೆಳ್ಳಿಯ ಆಭರಣಗಳು ಲಭ್ಯ

sapta habbada sa
Published on

ವಿಟ್ಲ: ಸಪ್ತ ಜುವೆಲ್ಸ್‌ನಲ್ಲಿ ಹಬ್ಬದ ಸಡಗರದ ಅಂಗವಾಗಿ ಆ.೩೦ರವರೆಗೆ ಚಿನ್ನಾಭರಣಗಳ ಖರೀದಿ ಹಾಗೂ ವಿನಿಮಯಕ್ಕೆ ವಿಶೇಷ ಯೋಜನೆ ಹಾಕಿಕೊಳ್ಳಲಾಗಿದೆ. ಹಬ್ಬದ ಸಡಗರಕ್ಕೆ ಹೊಸ ಬಂಗಾರದ ಸಿಂಗಾರ ನೀಡಲಾಗಿದೆ.

ವೆರೈಟಿ ಆಭರಣಗಳ ಸಂಗ್ರಹ ಹೊಂದಿದ ಸಪ್ತ ಜುವೆಲ್ಸ್ ಮಿತದರದ ಖಾತ್ರಿ ನೀಡುತ್ತದೆ. ೯೧೬ ಹಳೆಯ ಚಿನ್ನಾಭರಣಕ್ಕೆ ಪ್ರತಿ ಗ್ರಾಂ ಗೆ ೧೦೦ ರೂ. ಹಾಗೂ ೯೧೬ ಅಲ್ಲದ ಹಳೇ ಚಿನ್ನಾಭರಣಕ್ಕೆ ಪ್ರತಿ ಗ್ರಾಂಗೆ ೧೫೦ ರೂ. ಹೆಚ್ಚುವರಿ ಬೋನಸ್ ಮೌಲ್ಯಮಾಪನ ಪಡೆಯುವ ಅವಕಾಶ ನೀಡಲಾಗಿದೆ. ಹಳೇ ಚಿನ್ನಾಭರಣಗಳನ್ನು ಎಚ್.ಯು.ಐ.ಡಿ ಹಾಲ್ ಮಾರ್ಕ್‌ನ ಹೊಸ ಚಿನ್ನಾಭರಣಕ್ಕೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆ ಭಾನುವಾರವೂ ತೆರೆದಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬಹುದು.

ಗಣೇಶ ಹಬ್ಬಕ್ಕೆ

ಗಣೇಶ ಚೌತಿಯ ಸಲುವಾಗಿ ವಿನಾಯಕನಿಗೆ ಅಲಂಕಾರ ನಡೆಸಲು ಸಪ್ತದಲ್ಲಿ ಬೆಳ್ಳಿಯ ವಿಶೇಷ ಆಭರಣಗಳು ಲಭ್ಯವಿದೆ. ಕಿರೀಟ, ಮೋದಕ, ಮೂಶಿಕ, ಪಾಶಾಂಕುಶ, ಗರಿಕೆ ಸೇರಿ ವಿವಿಧ ಬೆಳ್ಳಿಯ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net