ಸಪ್ತ ಜುವೆಲ್ಸ್‌ನಲ್ಲಿ ದೀಪಾವಳಿ ವಿಶೇಷ ರಿಯಾಯಿತಿ - 2 ಸಾವಿರ ರೂ ಮೇಲ್ಪಟ್ಟ ಖರೀದಿಗೆ ವಿಜಯವಾಣಿ ವಿಜಯೋತ್ಸವ ಕೂಪನ್

PTR_1 NOV_4
Published on

ವಿಟ್ಲ: ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ನಲ್ಲಿರುವ ಸಪ್ತ ಜುವೆಲ್ಸ್‌ನಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಚಿನ್ನ ಖರೀದಿ ಮೇಲೆ ವಿಶೇಷ ರಿಯಾಯಿತಿ ಘೋಷಣೆ ಮಾಡಿದ್ದು, ೨ಸಾವಿರ ಮೇಲ್ಪಟ್ಟ ಖರೀದಿಗೆ ವಿಜಯವಾಣಿ ವಿಜಯೋತ್ಸವ ಕೂಪನ್ ನೀಡಲಾಗುತ್ತಿದೆ. ಈ ಮೂಲಕ ಸಪ್ತ ಗ್ರಾಹಕರಿಗೆ ಹಬ್ಬದ ಸಮಯದಲ್ಲಿ ವಿವಿಧ ರಿಯಾಯಿತಿ ಹಾಗೂ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

ವಿಶಿಷ್ಟ ಶೈಲಿಯ, ಆಧುನಿಕ, ಪಾರಂಪರಿಕ ಶೈಲಿಯ ಉತ್ತಮ ಗುಣಮಟ್ಟದ ಎಚ್.ಯು.ಐ.ಡಿ. ಮಾರ್ಕ್ ಹೊಂದಿರುವ ಆಭರಣಗಳನ್ನು ಗ್ರಾಹಕರಿಗೆ ಮಿತದರ ಖಾತ್ರಿಯೊಂದಿಗೆ ನೀಡುವ ಮೂಲಕ ಅತಿ ಕಡಿಮೆ ಅವಽಯಲ್ಲಿ ಪ್ರಸಿದ್ಧಿ ಪಡೆದಿದೆ. ವಿಟ್ಲ ಮಾತ್ರವಲ್ಲದೆ ಸುತ್ತಮುತ್ತಲಿನ ತಾಲೂಕು, ಜಿಲ್ಲೆ ಸೇರಿ ಹೊರ ಜಿಲ್ಲೆಯ ಗ್ರಾಹಕರು ಮನಸೂರೆಗೊಂಡ ಚಿನ್ನಾಭರಣ ಸಂಸ್ಥೆ ಸಪ್ತ ಜುವೆಲ್ಸ್. ಗ್ರಾಹಕ ಸ್ನೇಹಿ ಸೇವೆಯಿಂದ ಬಹುಜನರ ವಿಶ್ವಾಸದ ಮಳಿಗೆಯಾಗಿ ಹೆಸರುವಾಸಿಯಾಗಿದೆ.

ಗ್ರಾಹಕರ ಚಿನ್ನಾಭರಣಗಳನ್ನು ಹೊಸ ಎಚ್.ಯು.ಐ.ಡಿ ಮಾರ್ಕ್ ನ ಆಭರಣಗಳಿಗೆ ಕೊಡುಗೆಗಳೊಂದಿಗೆ ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ಖರೀದಿಗೆ ಡಿಸ್ಕೌಂಟ್ ಕೂಪನ್ ಪಡೆಯುವ ಅವಕಾಶವನ್ನು ಗ್ರಾಹಕರಿಗೆ ಸಪ್ತ ನೀಡಿದೆ. ಭಾನುವಾರವೂ ತೆರೆಯುವ ಮೂಲಕ ಕೆಲಸದಲ್ಲಿರುವ ಕುಟುಂಬಗಳಿಗೆ ರಜೆಯ ದಿನವೂ ಖರೀದಿಗೆ ಅನುಕೂಲವನ್ನು ಸಪ್ತ ಮಾಡಿಕೊಟ್ಟಿದೆ.

ಸಪ್ತ ಅಕ್ಷಯ ಮೂಲಕ ಆಭರಣ ಖರೀದಿಸಿ:

ಸಪ್ತ ಜುವೆಲ್ಸ್ ಗ್ರಾಹಕರಿಗಾಗಿ ಆಭರಣ ಖರೀದಿಯ ಯೋಜನೆಯನ್ನು ತಂದಿದೆ. ಪ್ರತಿ ತಿಂಗಳ ಆದಾಯದಲ್ಲಿ ಸಣ್ಣ ಮೊತ್ತವನ್ನು ಚಿನ್ನದಲ್ಲಿ ವಿನಿಯೋಗ ಮಾಡುವ ಮೂಲಕ ಪ್ರತೀ ವರ್ಷ ಬಂಗಾರ ಖರೀಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶಕಲ್ಪಿಸಿದೆ. ಹನಿ ಹನಿ ಸೇರಿ ಹಳ್ಳ, ತೆನೆ ತೆನೆ ಸೇರಿ ಬಳ್ಳ ಎಂಬ ನಾಣ್ಣುಡಿಯಂತೆ ಆಭರಣ ಖರೀದಿಯನ್ನು ೫೦೦ ಗುಣಕದಲ್ಲಿ ಪಾವತಿಸುವ ಹವ್ಯಾಸವನ್ನಾಗಿಸಿ ಪ್ರತಿ ವರ್ಷ ಆಭರಣ ಸಂಗ್ರಹವನ್ನು ವೃದ್ಧಿಸುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿದೆ. ಈ ಮೂಲಕ ಚಿನ್ನದ ದರವು ಸರಾಸರಿ ದರದಲ್ಲಿ ಲೆಕ್ಕಹಾಕಲಾಗುವುದಲ್ಲದೆ, ಆಭರಣದಲ್ಲಿ ಶೇ.೧೦.೫ ಬೋನಸ್ ಪಡೆಯಲು ಅವಕಾಶವಿದೆ.

ವಿಜಯವಾಣಿ ವಿಜಯೋತ್ಸವದಲ್ಲೇನಿದೆ?

ವಿಟ್ಲ ಆಸುಪಾಸಿನ ಜನರಿಗೆ ಚಿನ್ನ ಖರೀದಿಯ ಮೂಲಕ ಕೂಪನ್ ಪಡೆದು ಬಹುಮಾನ ಗೆಲ್ಲುವ ಅವಕಾಶವನ್ನು ಸಪ್ತ ಜುವೆಲ್ಸ್ ಸಹಕಾರದೊಂದಿಗೆ ವಿಜಯವಾಣಿ ವಿಜಯೋತ್ಸವದಲ್ಲಿ ಮಾಡಿಕೊಟ್ಟಿದೆ. ಹ್ಯಾಚ್ ಬ್ಯಾಕ್ ಕಾರು ೭, ದ್ವಿಚಕ್ರವಾಹನ ೧೦, ೩೨ಇಂಚಿನ ಎಲ್ ಇ ಡಿ ಟಿವಿ ೧೦, ರೆಫ್ರಿಜರೇಟರ್ ೧೦, ವಾಶಿಂಗ್ ಮೆಶಿನ್ ೧೦, ೧ಗ್ರಾಂ ಚಿನ್ನದ ನಾಣ್ಯ ೧೪೦, ಸೇಫ್ ಲಾಕರ್ ೧೦, ವೆಟ್ ಗ್ರೈಂಡರ್ ೨೦, ೨೦ ಗ್ರಾಂ ಬೆಳ್ಳಿ ನಾಣ್ಯ ೨೨೩, ಮಿಕ್ಸರ್ ೧೫೦, ಟ್ರಾಲಿ ಬ್ಯಾಗ್ ೨೦, ಎಲೆಕ್ಟ್ರಿಕ್ ಕೆಟಲ್ ೩೫೦, ಸ್ಮಾರ್ಟ್ ವಾಚ್ ೩೦, ಇಂಡಕ್ಷನ್ ಸ್ಟವ್ ೯೦, ಹಾಟ್ ಪ್ಲಾಸ್ಕ್ ೩೦೦, ಪ್ರೆಶರ್ ಕುಕ್ಕರ್ ೪೦೦, ಪೆಡೆಸ್ಟಲ್ -ನ್ ೨೬೦, ಕಾಪರ್ ಬಾಟಲ್ ೪೭೦ ಸೇರಿ ೨೫೦೦ಕ್ಕೂ ಅಽಕ ಬಹುಮಾನಗಳು ಗ್ರಾಹಕರಿಗೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net