ಸಪ್ತ ಜ್ಯುವೆಲ್ಸ್ ನಲ್ಲಿ ಅಕ್ಷಯ ತೃತೀಯಾ - ಬೆಳ್ಳಿ ಆಭರಣಗಳಿಗೆ ಶೇ.10ರಷ್ಟು ಕಡಿತ - ಚಿನ್ನಾಭರಣದಲ್ಲಿ ವಿಭಿನ್ನತೆ

PTR_10 MAY_4
Published on

ವಿಟ್ಲ: ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ವಿಶಾಲ ಮಳಿಗೆಯನ್ನು ಹೊಂದಿರುವ ಸಪ್ತ ಜ್ಯುವೆಲ್ಸ್ ನಲ್ಲಿ ಅಕ್ಷಯ ತೃತೀಯಾ ಅಂಗವಾಗಿ ನೂರಾರು ಗ್ರಾಹಕರು ಬೇಟಿ ನೀಡಿ ತಮ್ಮ ಇಷ್ಟದ ಚಿನ್ನಾಭರಣಗಳನ್ನು ಖರೀಸಿದರು.


ವಿಟ್ಲದಲ್ಲಿ ವಿಶಿಷ್ಠ ಚಿನ್ನಾಭರಣದ ಮಳಿಗೆ ಪ್ರಾರಂಭಿಸಿದ ಸಪ್ತ ಜ್ಯುವೆಲ್ಸ್ ಕಡಿಮೆ ಅವಽಯಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿನ್ನಾಭರಣದಲ್ಲಿ ವಿಭಿನ್ನತೆ ಹೊಂದಿರುವ ಸಪ್ತ ಗ್ರಾಹಕರ ಇಷ್ಟ ಪೂರೈಸುತ್ತಿದೆ. ಅಕ್ಷಯ ತೃತೀಯಾ ಅಂಗವಾಗಿ ಪ್ರತಿ ಗ್ರಾಂ ಚಿನ್ನದ ಆಭರಣ ಖರೀದಿಗೆ 125ರೂ ವರೆಗೆ ಕಡಿತ, ಬೆಳ್ಳಿ ಆಭರಣಗಳಿಗೆ ಶೇ.10ರವರೆಗೆ ಕಡಿತ, ಬೆಳ್ಳಿ ಪರಿಕರಗಳಿಗೆ ಶೇ.5ರಷ್ಟು ಕಡಿತ ನೀಡಲಾಗಿತ್ತು.


ಪಾಲುದಾರರಾದ ಅಜಕ್ಕಳ ಶ್ಯಾಮ ಭಟ್, ಸುದರ್ಶನ್ ಕುಮಾರ್ ಇರ್ಕಲಾಜೆ, ಸುಕುಮಾರ ಕಲ್ಲಮಜಲು, ನಿಶಾ ಪ್ರಶಾಂತ ಸರಳಾಯ, ಕೃಷ್ಣ ಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು, ದೇವಿಪ್ರಸಾದ್ ಚಂಗಲ್ಪಾಡಿ, ಶಿವಪ್ರಕಾಶ್ ಪಂಜಿಬಲ್ಲೆ, ಸಿಬ್ಬಂದಿಗಳಾದ ಗಣೇಶ್ ಕಿರಣ್, ಜಯ ಪ್ರಕಾಶ್, ಜಗದೀಶ್, ಚರಣ್, ಭವ್ಯಾ, ರಮ್ಯಾ, ತೃಪ್ತಿ, ಹರ್ಷಿತಾ ಉಪಸ್ಥಿತರಿದ್ದರು.


ವಿಶೇಷ ಸಂಗ್ರಹ: ಪಾರಂಪರಿಕ ಮಲ್ಲಿಗೆ ಮೊಗ್ಗು ನೆಕ್ಲೇಸ್, ಮೊಹನ ಮಾಲಾ, ಕೊತ್ತಂಬರಿ ಸರ, ರುದ್ರಾಕ್ಷಮಾಲಾ, ತುಳಸಿಮಣಿಸರ, ನವರತ್ನ ಸರ, ಕಠಾಣಿ ಸರ, ಗಿಳಿ ಓಲೆ ನೆಕ್ ಲೇಸ್ ಸೆಟ್ ವಿಶೇಷವಾಗಿದೆ. ಟೆಂಪಲ್ ಕಲೆಕ್ಷನ್ ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ರಿಚ್ ಲುಕ್ ನೀಡುವ ರುಬಿ, ಎಮರಾಲ್ಡ್, ಸಿ. ಝೆಡ್. ಸ್ಟೋನ್ ನೆಕ್ಲೇಸ್, ಲೈಟ್ ವೈಟ್ ಕೋಲ್ಕತ್ತ ವೆಡ್ಡಿಂಗ್ ಸೆಟ್, ನೆಕ್ಲೇಸ್, ಪೆಂಡೆAಟ್ಸ್ ಗಳು, ಬ್ಯಾಂಡ್ ರಿಂಗ್, ಮಾಟಿ, ಮುಂದಲೆ, ಡಿಫೆರೆಂಟ್ ಆಂಡ್ ಸ್ಪೆಷಲ್ ಕಲೆಕ್ಷನ್ ಇನ್ ಕೋಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲಾ, ವೆರೈಟಿ ಆಫ್ ಬೆಂಗಾಲಿ ಹ್ಯಾಂಡ್ ಮೇಡ್ ಚೈನ್ಸ್, ಕೊಯಂಬುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಮುಸ್ಟಿ ಚೈನ್, ರೇಡಿಯೋ ಚೈನ್, ಕೇರಳ ಹ್ಯಾಂಡ್ ಮೇಡ್ ವೈನ್ಸ್, ಇಂಡೋ ಇಟಲಿಯನ್ ಚೈನ್ಸ್ ಗಳು, ವಿವಾಹ ಸಂಗ್ರಹ, ಪದಕಗಳ ಸಂಗ್ರಹ, ವಿವಿಧ ನಮೂನೆಯ ಉಂಗುರ, ಜುಮ್ಕ ಸಂಗ್ರಹ, ವಿಶೇಷ ಮಾಂಗಲ್ಯ ಸರ, ಗಿಫ್ಟ್ ಆರ್ಟಿಕಲ್ಸ್ ಅನ್ನು ಮಳಿಗೆ ಹೊಂದಿ ಗ್ರಾಹಕರನ್ನು ಆಕರ್ಷಿಸುತ್ತಿದೆ.

  • ಬೆಳ್ಳಿಯ ವಿಶೇಷತೆಗಳು: ಆರ್ನಮೆಂಟ್ಸ್, ಸ್ಟಡ್ಸ್, ರಿಂಗ್ಸ್, ಚೈನ್, ಹ್ಯಾಂಡ್ ಮೇಡ್ ದೈವ ದೇವರ ಪರಿಕರಗಳು, ಆಭರಣಗಳು, ದೇವರ ವಿಗ್ರಹಗಳು, ಕರ್ಪೂರಾರತಿ, ಏಕಾರತಿ, ಶಂಕಾರತಿ, ಸರ್ಪಾರತಿ, ಕೂರ್ಮಾರತಿ, ಕಾಮಾಕ್ಷಿ ದೀಪ ಸೇರಿ ವಿವಿಧ ವಿನ್ಯಾಸದ ಬೆಳ್ಳಿಯ ಆರತಿಗಳು ಲಭ್ಯವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net