

ರಾಯಬಾಗ ತಾಲೂಕಿನ ಭಿರಡಿ ಗ್ರಾಮದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 61ನೇ ಜನ್ಮದಿನ ನಿಮಿತ್ತ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಶುಕ್ರವಾರ ಯಕ್ಸಂಬಾ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಭಿರಡಿ ಶಾಖೆಯಿಂದ 100 ಸಸಿ ವಿತರಿಸಿ, ಸಿಹಿ ಹಂಚಲಾಯಿತು.
ರಾಮು ನಿಶಾನದಾರ, ಮಹಾದೇವ ಬೋರಗಾಂವೆ, ಮಹಾದೇವ ಭೆಂಡೆ, ಪೀರಪ್ಪ ಕುಡಚೆ, ಮುರಘೇಂದ್ರ ನಿಶಾನದಾರ, ಮಲ್ಲಿಕಾರ್ಜುನ ಭೆಂಡೆ, ವಿರೂಪಾಕ್ಷಿ ಕುಡಚೆ, ಸುಧಾಕರ ನಿಡವಣಿ, ರಾವಳ ನಿಡವಣಿ. ಶ್ರೀಶೈಲ ಮಿರ್ಜೆ, ಪ್ರಕಾಶ ಭೆಂಡೆ, ಮುಖ್ಯ ಶಿಕ್ಷಕ ಎ.ವಿ.ಮೋರದ, ರಾಘವೇಂದ್ರ ಕಲಾಲ ಇದ್ದರು.