

ರಾಯಚೂರು ಪರಿಸರ ಸಂರಕ್ಷ ಣೆ ಹಿಂದೆAದಿಗಿAತ ಈಗ ಹೆಚ್ಚು ಮಹತ್ವ ಪಡೆಯುತ್ತಿದೆ. ಪ್ರಕೃತಿ ವಿಕೋಪಗಳು ಈಗಾಗಲೇ ಮನುಕುಲಕ್ಕೆ ಪಾಠ ಹೇಳಿಕೊಡುತ್ತಿವೆ. ಪರಿಸರ ಸಂರಕ್ಷ ಣೆ ಈಗಿರುವ ಮಾರ್ಗವಾಗಿದೆ. ಈಗ ನೆಟ್ಟಿರುವ ಸಸಿಗಳನ್ನು ಗಿಡ, ಮರಗಳನ್ನಾಗಿ ಪೊಷಿಸುವ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿ ವಹಿಸುತ್ತದೆ ಜತೆಗೆ ವಿದ್ಯಾರ್ಥಿಗಳು -ೆÇÃಷಣೆ ಮಾಡಬೇಕು ಎಂದು ಸಂಜೀವಿನಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸದಸ್ಯ ಪ್ರಕಾಶ ಪಾಟೀಲï ಹೇಳಿದರು.
ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಸಂಜೀವಿನಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸಸಿ ನೇಡುವ ಕಾರ್ಯಕ್ರಮದಲ್ಲಿ ಮಾತನಾಡಿ, ದಿನೇ ದಿನೇ ಹೆಚ್ಚುತ್ತಿರುವ ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬ ಮಗು, ಪ್ರತಿಯೊಬ್ಬ ನಾಗರಿಕರು ಮರಗಿಡಗಳನ್ನು ನೆಟ್ಟು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ.
ನಾವು ಕೇವಲ ಒಂದು ಶಾಲೆಯಲ್ಲಿ ಮಾತ್ರವಲ್ಲದೆ ಮಲಿಯಾಬಾದï, ಹೊಸೂರು, ಮಮದಾಪುರ, ಮಲಿಯಾಬಾದï ಕ್ಯಾಂಪï, ಸಿಯಾತಲಾಬï ಶಾಲೆ ಸೇರಿದಂತೆ ೨೦ ಕ್ಕೂ ಹೆಚ್ಚು ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪರಿಸರ ಪ್ರe್ಞÉ ಮೂಡಿಸುವ ಅಗತ್ಯವಿದೆ. ಶಾಲೆಗಳಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಶಾಲೆಯ ಸೌಂದರ್ಯವನ್ನು ಹೆಚ್ಚಿಸುವದರ ಜೊತೆಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಔರಂಗಜೇಬï,ಶಿಕ್ಷಕಿ ವಿಜಯಲಕ್ಷ್ಮಿ , ಲಕ್ಷ್ಮಿ ,ಸುಜÁತ,ರಾಧಾಬಾಯಿ, ಸುನೀಲï ಜÁಡಲದಿನ್ನಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.