

ಚಿಕ್ಕೋಡಿ ಗ್ರಾಮೀಣ: ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಮೆರಿಕಾದ ಪ್ರತಿಷ್ಠಿತ ಥಾಮಸ್ ಜೇಫರ್ಸನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯರಾಗಿದ್ದಾರೆ ಎಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಚೇತನ ಪ್ರಕಾಶ ಪಾಟೀಲ ಹೇಳಿದರು.
ಸದಲಗಾ ಪಟ್ಟಣದ ಡಾ ಪ್ರಭಾಕರ ಕೋರೆ ಅಭಿಮಾನಿ ಬಳಗ, ಸದಲಗಾ ಶಿಕ್ಷಣ ಸಂಸ್ಥೆ, ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್, ಶ್ರೀ ದೂಧಗಂಗಾ ವಿವಿಧೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸೇರಿ ವಿವಿಧ ಸಂಘಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೃಕ್ಷಾರೋಪನ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಪ್ರಭಾಕರ ಕೋರೆ ಜನ್ಮದಿನದ ಅಂಗವಾಗಿ ಸದಲಗಾದ ಕೋರೆಯವರ ಅಭಿಮಾನಿ ಬಳಗದಿಂದ ಪ್ರತಿವರ್ಷ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಪೈಕಿ ಪಟ್ಟಣದಲ್ಲಿ 10 ವರ್ಷದಿಂದ ಸಸಿ ನೆಡಲಾಗುತ್ತಿದೆ ಎಂದರು.
ಶ್ರೀ ದೂಧಗಂಗಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೇತನ ಪಾಟೀಲ, ಅನಿರುದ್ದ ಪಾಟೀಲ, ಮಹಾದೇವ ಖೋತ, ಅತಿಕ್ರಾಂತ ಪಾಟೀಲ, ಭರತ ಪಾಟೀಲ, ಸುರೇಶ ಪಡಲಾಳೆ, ಮಹಾದೇವ ಖೆಬ್ಬೂಡೆ, ಜೆ.ಜೆ.ಲಂಗೋಟೆ, ಅಶೋಕ ಜಗತಾಪ, ಸುನೀಲ ಕಲಾಜೆ ಇತರರು ಇದ್ದರು.