ಸಸಿ ನೆಡಲು ಸಹಕರಿಸಿ

2KOKATANUR22-Web
ಸಸ್ಯ ಪಾಲನಾ ಘಟಕದಲ್ಲಿನ ಸಸಿಗಳನ್ನು ತಾಪಂ ಇಒ ರವೀಂದ್ರ ಬಂಗಾರೆಪ್ಪನವರ ಪರಿಶೀಲಿಸಿದರು. ರವಿ ಹಾದಿಮನಿ ಇತರರಿದ್ದರು.
Published on

ಕೊಕಟನೂರ: ಗ್ರಾಮದ ಸಾಮಾಜಿಕ ವಲಯ ಅರಣ್ಯ ಸಸ್ಯ ಪಾಲನಾ ಘಟಕಕ್ಕೆ ಶುಕ್ರವಾರ ತಾಪಂ ಇಒ ರವೀಂದ್ರ ಬಂಗಾರೆಪ್ಪನವರ ಭೇಟಿ ನೀಡಿ ಸಸಿಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ತಾಲೂಕಿನಲ್ಲಿ ಸರ್ಕಾರಿ ಶಾಲೆ, ಕಾಲೇಜು, ವಸತಿ ನಿಲಯ ಆವರಣ ಸೇರಿ ಗ್ರಾಪಂ ಹಾಗೂ ಕಂದಾಯ ಇಲಾಖೆ ಸರ್ಕಾರಿ ಬಯಲು ಜಮೀನಿನಲ್ಲಿ ಸುಮಾರು 9.20 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗುವುದು. ತಾಲೂಕಿನ ಸಾರ್ವಜನಿಕರು ಸಸಿ ನೆಡುವುದಕ್ಕೆ ಸಹಕರಿಸಬೇಕು ಎಂದರು. ರವಿ ಹಾದಿಮನಿ, ಎಸ್. ರಾಜಕುಮಾರ, ರಾಘವೇಂದ್ರ ಕುಲಕರ್ಣಿ, ಯಲ್ಲಪ್ಪ ರಡ್ಡೇರಹಟ್ಟಿ, ಕರೇಪ್ಪ ಬಣಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net