

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಪರಿಸರ ತಜ್ಞ ಡಾ. ಮಹಾಂತೇಶ ತಪಶೆಟ್ಟಿ ಸಸಿ ನೆಟ್ಟು ಮಾತನಾಡಿದ ಅವರು, ಸಸಿ ನೆಡುವ ಪದ್ಧತಿ ಹಾಗೂ ಪೋಷಣೆಗೆ ವಹಿಸಬೇಕಾದ ಕಾಳಜಿ ಕುರಿತು ವಿವರಿಸಿದರು.
ಉದ್ಯಮಿ ಚೆನ್ನು ಹೊಸಮನಿ ಮಾತನಾಡಿ, ಶ್ರೀಮಠದ ಆವರಣದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಸಂದೇಶ ನೀಡಿದರು.
ಟ್ರಸ್ಟ್ ಕಮಿಟಿ ವೈಸ್ ಚೇರ್ಮನ್ ವಿನಾಯಕ ಘೋಡಕೆ ಅಧ್ಯಕ್ಷತೆ ವಹಿಸಿದ್ದರು.
ಧರ್ಮದರ್ಶಿ ಉದಯಕುಮಾರ ಡಿ. ನಾಯ್ಕ, ಮಿತವಾಗಿ ಪ್ಲಾಸ್ಟಿಕ್ ಬಳಸುವುದರ ಜತೆಗೆ ಪರಿಸರ ಸಂರಕ್ಷಿಸಲು ಕರೆ ನೀಡಿದರು. ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಮಂಜುನಾಥ ಮುನವಳ್ಳಿ ಹಾಗೂ ಶ್ರೀಮಠದ ಮ್ಯಾನೇಜರ ಈರಣ್ಣ ತುಪ್ಪದ, ಭಕ್ತರು ಉಪಸ್ಥಿತರಿದ್ದರು.
ಧರ್ಮದರ್ಶಿ ಗೀತಾ ಕಲಬುರ್ಗಿ ನಿರ್ವಹಿಸಿದರು. ಧರ್ಮದರ್ಶಿ ಸರ್ವಮಂಗಳಾ ಪಾಠಕ ವಂದಿಸಿದರು.