

ಕೋಟ: ಯುವ ಮನಸ್ಸುಗಳಿಗೆ ಸಂತೋಷ್ ಮೇಷ್ಟ್ರು ವ್ಯಕ್ತಿತ್ವವೇ ವಾದರಿ ಎಂದು ಕೋಟದ ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಸಿ.ಕುಂದರ್ ಹೇಳಿದರು.
ಇತ್ತೀಚೆಗೆ ನಿಧನರಾದ ಯುವ ಸಾಹಿತಿ ಶಿಕ್ಷಕ ಸಂತೋಷ್ ಕುವಾರ್ ಕೋಟ ಅವರಿಗೆ ಇಂಡಿಕಾ ಕಲಾ ಬಳಗ ಪಡುಕರೆ ಜಟ್ಟಿಗೇಶ್ವರ ದೇಗುಲದಲ್ಲಿ ಹಮ್ಮಿಕೊಂಡ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಸಂತೋಷ್ ಕುವಾರ್ ಭಾವಚಿತ್ರಕ್ಕೆ ಗಣ್ಯರಾದ ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ನಿರ್ದೇಶಕ ತಿಮ್ಮ ಪೂಜಾರಿ, ಸಾಹಿತಿ ಶಿಕ್ಷಕ ನರೇಂದ್ರ ಕುವಾರ್, ವಕೀಲ ಟಿ.ಮಂಜುನಾಥ್, ಹಿರಿಯರಾದ ದಾರೋಜ್ಜಿಮನೆ ಆನಂದ್, ಪ್ರಮುಖರಾದ ಸಂತೋಷ್ ಕಾಂಚನ್, ಮಂಜುನಾಥ್ ಭಂಡಾರಿ, ಭುಜಂಗ ಗುರಿಕಾರ, ನಾರಾಯಣ ತಾಂಡೇಲ, ಅಜಿತ್ ಆಚಾರ್, ಲಲಿತಾ ಪೂಜಾರಿ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು. ಇಂಡಿಕಾ ಕಲಾ ಬಳಗ ಅಧ್ಯಕ್ಷ ಜಯರಾಮ ಶೆಟ್ಟಿ ಪ್ರಾಸ್ತಾವಿಸಿದರು. ಸದಸ್ಯ ಪ್ರಭಾಕರ್ ಪಡುಕರೆ ನಿರೂಪಿಸಿದರು.