ವಿಜ್ಞಾನದಲ್ಲಿ ಸಾಧಿಸಿದಾಗ ಆರ್ಥಿಕತೆಗೆ ಬಲ

Untitled design (8)
ಸಿರಗುಪ್ಪದ ಶಾಂತಿನಿಕೇತನ ಅನುದಾನಿತ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಚಾರ ಗೋಷ್ಠಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಬಿಇಒ ಎಚ್.ಗುರಪ್ಪ, ಮುಖ್ಯಶಿಕ್ಷಕ ಮುರಳೀಧರ, ಜಿಲ್ಲಾ ಡಯಟ್ ನೋಡಲ್ ಅಧಿಕಾರಿ ಪಾಂಡು, ಬಿಆರ್‌ಪಿ ಯೋಗನಂದಯ್ಯ, ಸಂಸ್ಥೆಯ ಅಧ್ಯಕ್ಷ ಕೆ.ಕೃಷ್ಣಪ್ಪ ಇನ್ನಿತರರಿದ್ದರು.
Published on

ಸಿರಗುಪ್ಪ: ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು ಅರಿತುಕೊಂಡು ಸಾಧನೆ ಮಾಡಲಿ ಎಂದು ಬಿಇಒ ಎಚ್.ಗುರಪ್ಪ ಹೇಳಿದರು.

ವಿಜ್ಞಾನದಲ್ಲಿ ಸಾಧನೆ ಅಗತ್ಯ

ನಗರದ ಶಾಂತಿನಿಕೇತನ ಅನುದಾನಿತ ಪ್ರೌಢ ಶಾಲೆಯಲ್ಲಿ ತಾಲೂಕಿನ ವಿವಿಧ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಪಂಚದಲ್ಲಿನ ದೇಶಗಳು ವೈಜ್ಞಾನಿಕವಾ ಮುಂದುವರೆಯಲು ಹಲವಾರು ಹೊಸ ಸಂಶೋಧನೆಗಳನ್ನು ಮಾಡುತ್ತಿವೆ. ವಿಜ್ಞಾನದಲ್ಲಿ ಸಾಧಿಸಿದಾಗ ಆರ್ಥಿಕತೆಯಕತೆಗೆ ಬಲ ನೀಡಿದಂತಾಗಲಿದೆ ಎಂದು ಹೇಳಿದರು.

ವಸ್ತು ಪ್ರದರ್ಶನ ಸ್ಪರ್ಧೆ

ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ತಾಲೂಕಿನ ಸಿರಿಗೇರಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪ್ರಥಮ, ನಗರದ ಆದರ್ಶ ವಿದ್ಯಾಲಯ ದ್ವಿತೀಯ, ಎಸ್.ಇ.ಎಸ್.ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆದವು.

ವಿಚಾರ ಗೋಷ್ಠಿಯಲ್ಲಿ ನಗರದ ಆದರ್ಶ ವಿದ್ಯಾಲಯ ಶಾಲೆಯ ವಿನಿಷ(ಪ್ರಥಮ), ತೆಕ್ಕಲಕೋಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಶಿವರಾಜ(ದ್ವಿತೀಯ), ಸರ್ಕಾರಿ ಬಾಲಕಿರ ಪ್ರೌಢ ಶಾಲೆಯ ಸಿಂಚನ ತೃತೀಯ ಸ್ಥಾನ ಪಡೆದರು.

ಮುಖ್ಯಶಿಕ್ಷಕ ಮುರಳೀಧರ, ಜಿಲ್ಲಾ ಡಯಟ್ ನೋಡಲ್ ಅಧಿಕಾರಿ ಪಾಂಡು, ಬಿಆರ್‌ಪಿ ಯೋಗನಂದಯ್ಯ, ಸಂಸ್ಥೆಯ ಅಧ್ಯಕ್ಷ ಕೆ.ಕೃಷ್ಣಪ್ಪ ಇನ್ನಿತರರಿದ್ದರು. ತಾಲೂಕಿನ ವಿವಿಧ ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net