ಕೊಂಕಣ್ ರೈಲ್ವೆಗೆ ಸಂತೋಷ್ ಕುಮಾರ್ ಝಾ ನೂತನ ಸಿಎಂಡಿ

Jha
Published on

ಮಂಗಳೂರು: ಕೊಂಕಣ್ ರೈಲ್ವೆ ಚೇರ್ಮನ್ ಮತ್ತು ವ್ಯವಸ್ಥಾಪಕ್ ನಿರ್ದೇಶಕರಾಗಿ ಸಂತೋಷ್ ಕುಮಾರ್ ಝಾ ನೇಮಕಗೊಂಡಿದ್ದಾರೆ. ನವಿ ಮುಂಬೈಯ ಬೇಲಾಪುರದಲ್ಲಿರುವ ಕೊಂಕಣ್ ರೈಲ್ವೆ ಪ್ರಧಾನ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಎಂಟು ವರ್ಷಗಳಿಂದ ಕೊಂಕಣ್ ರೈಲ್ವೆ ಕಾರ್ಪೊರೇಷನ್ ಮುನ್ನಡೆಸಿದ್ದ ಸಂಜಯ್ ಗುಪ್ತಾ ಭಾನುವಾರ ನಿವೃತ್ತಿ ಹೊಂದಿದ್ದಾರೆ. 1992ನೇ ಬ್ಯಾಚಿನ ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವೀಸಸ್(ಐಆರ್ ಟಿಎಸ್ )ಅಧಿಕಾರಿಯಾದ ಝಾ ಲಕ್ನೋ ವಿವಿಯಿಂದ ಎಂ.ಎಸ್ಸಿ., ಜಮನ್ ಲಾಲ್ ಬಜಾಜ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನಿಂದ ಎಂಬಿಎ ಪದವಿ ಪಡೆದಿದ್ದಾರೆ.
ಕೊಂಕಣ ರೈಲ್ವೆ ಕಾರ್ಪೊರೇಷನ್ ನಿರ್ವಹಣೆ ಮತ್ತು ವಾಣಿಜ್ಯ ವಿಭಾಗದ ನಿರ್ದೇಶಕರಾಗಿದ್ದ ಝಾ, ರೈಲ್ವೆ ನಿರ್ವಹಣೆ, ಮೂಲಭೂತ ಸೌಲಭ್ಯ ಯೋಜನೆ, ವ್ಯವಹಾರ ಅಭಿವೃದ್ಧಿ ಕ್ಷೇತ್ರದಲ್ಲಿ 28ವರ್ಷಗಳ ಅನುಭವ ಹೊಂದಿದ್ದಾರೆ.
ರೈಲ್ವೆಯ ಪ್ರಮುಖ ವಿಭಾಗಗಳಲ್ಲಿ ನಿರ್ವಹಣಾ ಮುಖ್ಯಸ್ಥರಾಗಿ, ಲಾಜಿಸ್ಟಿಕ್ ವಲಯದ ಪ್ರಮುಖ ವ್ಯವಹಾರ ಘಟಕಗಳ ನಿರ್ವಹಣೆ ಜತೆಗೆ ವಾಣಿಜ್ಯ ಮತ್ತು ವ್ಯವಹಾರ ಅಭಿವೃದ್ಧಿ ವಿಭಾಗದಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net