ಕಂಪಲಾಪುರ ಸಹಕಾರ ಸಂಘಕ್ಕೆ ಸಂತೋಷ್ ಅಧ್ಯಕ್ಷ

1714993693346
ಕಂಪಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ ಕೆ.ಆರ್.ಸಂತೋಷ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಬಿ.ಕೆ.ತಮ್ಮಯ್ಯ, ಕೆ.ಎನ್.ಹರ್ಷ, ನಿರ್ದೇಶಕರು ಇದ್ದರು.
Published on

ಕಂಪಲಾಪುರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ.ಆರ್.ಸಂತೋಷ್ ಅವಿರೋಧವಾಗಿ ಆಯ್ಕೆಯಾದರು.

ನಾಗೇಗೌಡ ಆಂತರಿಕ ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸಂತೋಷ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಕೆ.ಬಿ.ಅಶ್ವಿನ್ ಕುಮಾರ್ ಅಧಿಕೃತವಾಗಿ ಘೋಷಿಸಿದರು. ಉಪಾಧ್ಯಕ್ಷ ಬಿ.ಕೆ.ತಮ್ಮಯ್ಯ, ಸಿಇಒ ಕೆ.ಎನ್.ಹರ್ಷ, ನಿರ್ದೇಶಕರಾದ ಕೆ.ಕುಮಾರ್, ಮಹದೇವ್, ರವಿ, ಗಿರೀಶ್, ಮಹದೇವ, ಲಕ್ಷ್ಮಣ್, ಮಣಿಮಹೇಶ್, ಭಾಗ್ಯರಾಜೇಗೌಡ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net