ಮುಂಬೈಯ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಂತೋಷ್ ಅಂದ್ರಾದೆ ಅವರ ಕಲಾ ಪ್ರದರ್ಶನ

mng-17sep-santhosh (1)
Published on


ಮಂಗಳೂರು : ಮಂಗಳೂರಿನ ಖ್ಯಾತ ಕಲಾವಿದ ಸಂತೋಷ್ ಅಂದ್ರಾದೆ ಅವರ ‘ಇನ್ ಪರ್ಸ್ಯೂಟ್ ಆಫ್ ಹಾರ್ಮನಿ ‘(ಸಾಮರಸ್ಯದ ಅನ್ವೇಷಣೆಯಲ್ಲಿ) ಶೀರ್ಷಿಕೆಯ ಏಕವ್ಯಕ್ತಿ ಕಲಾ ಪ್ರದರ್ಶನ ಮಂಗಳವಾರ ಮುಂಬೈಯ ಪ್ರತಿಷ್ಠಿತ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಆರಂಭವಾಗಿದ್ದು, ಸೆ.23ರವರೆಗೆ ನಡೆಯಲಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ ಈ ಪ್ರದರ್ಶನವು ಕ್ಯಾನ್ವಾಸ್ ಮತ್ತು ಕಾಗದದ ಮೇಲೆ ಅಕ್ರಿಲಿಕ್ ಹಾಗೂ ಮಿಶ್ರ ಮಾಧ್ಯಮವನ್ನು ಬಳಸಿ ರಚಿಸಲಾದ 30ಕ್ಕೂ ಹೆಚ್ಚು ಕಲಾಕೃತಿಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net