ಕೂಡಿಗೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ

santhe
Published on

ಕುಶಾಲನಗರ:

ಕುಶಾಲನಗರ ತಾಲೂಕು ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ಸಂತೆ ಆಯೋಜನೆ ಮಾಡಲಾಗಿತ್ತು. ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಂದೀಶ್ ಮಾತಾನಾಡಿ ಶಾಲೆಗಳಲ್ಲಿ ಮಕ್ಕಳಿಗಾಗಿ ಸಂತೆಯ ವ್ಯವಸ್ಥೆ ಮಾಡುವುದರಿಂದಾಗಿ ಮಕ್ಕಳ ವ್ಯವಹಾರ ಜ್ಞಾನದ ಬೆಳೆವಣಿಗೆ ಮತ್ತು ಗ್ರಾಮೀಣ ಪ್ರದೇಶದ ವಿವಿಧ ಬಗೆಯ ವಸ್ತುಗಳ ಮಾಹಿತಿ, ವ್ಯಾಪಾರದ ಮೂಲಕ ಜನ ಸಂಪರ್ಕದ ವಿಷಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಮಕ್ಕಳಲ್ಲಿ ಬರುವುದರಿಂದ ಮುಂದಿನ ದಿನಗಳಲ್ಲಿ ವ್ಯವಹಾರಿಕ ದೃಷ್ಟಿಯ ಬೆಳೆವಣಿಗೆಗೆ ಅನುಕೂಲ ಕಲ್ಪಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಬಗ್ಗೆಯ ತರಕಾರಿ, ಇತರೆ ತಿಂಡಿ ತಿನಿಸುಗಳನ್ನು ತಂದು ಮಕ್ಕಳು ಮಾರಾಟ ಮಾಡಿದರು.

ಶಾಲಾ ಮುಖ್ಯೋಪಾಧ್ಯಾಯ ಎಸ್. ಎ. ಯೋಗೇಶ್, ಶಿಕ್ಷಕರಾದ ನಾಗರಾಜು, ಶೈಲಜಾ, ತಾರಾಮಣಿ, ನೇತ್ರ‍್ರಾ, ಶಶಿಕಲಾ, ಸೌಮ್ಯ ಹಾಗೂ ಶಾಲಾ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net