

ಉಡುಪಿ: ಸಮಾಜದಲ್ಲಿ ರಾಮನ ಬದಲು ರಾವಣನ ಬಲವೇ ಹೆಚ್ಚಾಗುತ್ತಿದೆ. ಜಾಂಬವಂತರೆಲ್ಲಾ ಮಲಗಿದ್ದಾರೆ. ಕುಂಭಕರ್ಣನ ಪ್ರವೃತ್ತು ಹಿಂದೂಗಳಲ್ಲಿ ಕಾಣುತ್ತಿದೆ. ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರತಿ ಮನೆಗಳಿಂದ ರಾಮ, ಹನುಮಂತರು ಹೊರ ಬರಬೇಕು. ಮಕ್ಕಳಲ್ಲಿ ರಾಮಪ್ರಜ್ಞೆ ಜಾಗೃತಿಯಾಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಉಡುಪಿ ಪೆರಣಂಕಿಲ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಿ ಸಿದ್ಧಾಂತೋತ್ಸವ ಹಾಗೂ ರಾಮೋತ್ಸವ ಅಂಗವಾಗಿ ನಡೆದ ಸಂತ ಸಂಗಮ ಮತ್ತು ಬೃಹತ್ ಹಿಂದು ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಅಶೀರ್ವಚನ ನೀಡಿದರು.
ರಾವಣ ಬಲ ಕಂಡು ಕಪಿ ಸೇನೆ ಓಡಿ ಹೋದಂತೆ ಅನ್ಯಾಯಗಳನ್ನು ಕಂಡು ಸಮಾಜ ಮೌನವಹಿಸಿದೆ. ಇಂಥ ಪ್ರವೃತ್ತಿ ಬದಲಾಗಬೇಕು. ಸಾತ್ವಿಕ ಬಲ ಹೆಚ್ಚಾಗಬೇಕು. ಮಕ್ಕಳನ್ನು ರಾಮರನ್ನಾಗಿ ಮಾಡಿದರೆ ರಾಮರಾಜ್ಯ ನಿರ್ಮಾಣ ಕನಸು ನನಸಾಗಲು ಸಾಧ್ಯ ಎಂದರು.
ಹರಿಹರಪುರದ ಶ್ರೀಶಂಕರಾಚಾರ್ಯ ಶಾರದಾ ನರಸಿಂಹ ಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಮಾತನಾಡಿ, ರಾಷ್ಟ್ರಭಕ್ತಿ ಬೇರೆಯಲ್ಲ. ದೈವಭಕ್ತಿ ಬೇರೆಯಲ್ಲ. ಸಮಾಜಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿದವರು ರಾಷ್ಟ್ರಕಾರಣಗಳಾಗುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ರಾಷ್ಟ್ರೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. 200 ವರ್ಷಗಳಿಂದ ಈ ಮಣ್ಣ್ಣಿನ ಸಂಸತಿ ಸಮಾಧಿ ಮಾಡಲು ಪಡೆದು ಆಳುವ ನೀತಿ ಮೂಲಕ ಪ್ರಯತ್ನ ನಡೆಯುತ್ತಿದೆ. ಮೊಮ್ಮಕ್ಕಳು, ಮರಿಮಕ್ಕಳ ಕಾಲಕ್ಕೆ ತೊಂದರೆ ಅನುಭವಿಸಬಾರದು ಎಂದಾದರೆ ಕೌಟುಂಬಿಕ ಮೌಲ್ಯಗಳನ್ನು ಮರೆಯಬಾರದು.
ಭೀಮನಕಟ್ಟೆ ಮಠದ ರುವರೇಂದ್ರ ಸ್ವಾಮೀಜಿ, ಗೋವಾ ಕವಳೇ ಮಠದ ಸ್ವಾಮಿ ಶ್ರೀ ಶಿವಾನಂದ ಸರಸ್ವತಿ ಮಹಾರಾಜ್, ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ನೀರೆಬೈಲೂರು ರಾಮಕೃಷ್ಣಾಶ್ರಮದ ಶ್ರೀ ಸ್ವಾಮೀ ವಿನಾಯಕಾನಂದ ಜೀ, ಮಂಗಳೂರು ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ಜಿತಕಾಮಾನಂದ ಜೀ, ಮಂಜೇಶ್ವರ ಕೊಂಡೆವೂರು ಆಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ, ಬೆಂಗಳೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬಾಳ್ಕುದ್ರು ಮಠ ನೃಸಿಂಹಾಶ್ರಮದ ಶ್ರೀ ಸದಾಶಿವ ವಾಸುದೇವಾಶ್ರಮ ಸ್ವಾಮೀಜಿ, ಮೂಡಬಿದಿರೆ ಕರಿಂಜ ಮಠದ ಮುಕ್ತಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಗಾರ್ಗಿ ಶಬರಾಯ ಪ್ರಾರ್ಥಿಸಿದರು. ಕೃಷ್ಣರಾಜ ಕುತ್ಪಾಡಿ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಜೈನರು ವೇದವಿರೋಧಿಗಳಲ್ಲ. ವೇದ ಪರಂಪರೆಯಲ್ಲಿ ಜೈನ ದರ್ಶನ ಅಡಕವಾಗಿದೆ. ವಿಷ್ಣು ವೃಷಭದೇವನಾಗಿ ಇದನ್ನು ಹೇಳಿದ್ದಾನೆ. ಹೀಗಾಗಿ ಎಲ್ಲಾ ಪೀಠಗಳು ಸನಾತನ ಪರಂಪರೆಯ ಒಳಿತಿಗೆ ಒಂದಾಗಬೇಕು. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕದರ್ಯ ಸ್ವಾಮೀಜಿ , ಮೂಡಬಿದಿರೆ ಜೈನ ಮಠ ವಾಮಮಾರ್ಗ ಬಿಟ್ಟು ರಾಮಮಾರ್ಗ ಅನುಸರಿಸಿದರೆ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯ. ರಾಮ ಸಹಿತ ನಾಲ್ವರು ಸಹೋದರರು ಧರ್ಮ, ಅರ್ಥ, ಕಾಮ, ಮೋಕ್ಷದ ಸಂಕೇತಗಳಾಗಿದ್ದಾರೆ. ತ್ಯಾಗದಿಂದ ಅಮೃತತ್ವ ಗಳಿಸಬಹುದು. ಇದಕ್ಕೆ ಉತ್ತಮ ಉದಾಹರಣೆ ಪೇಜಾವರ ಶ್ರೀಗಳು. 5ನೇ ಪರ್ಯಾಯವನ್ನು ಗುರುಗಳಿಗಾಗಿ ತ್ಯಾಗ ಮಾಡಿದ ಪ್ರತಿಲವಾಗಿ ಅಯೋಧ್ಯೆಯಲ್ಲಿ ರಾಮಸೇವೆಯ ಭಾಗ್ಯ ಪಡೆದಿದ್ದಾರೆ. ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಆನೆಗೊಂದಿ ಸರಸ್ವತಿ ಪೀಠ. ದೇಶದಲ್ಲಿ ಸೋಶಿಯಲಿಸಂ ಮತ್ತು ಕಮ್ಯುನಿಸಂನ ಪ್ರಭಾವದಿಂದ ಸಮಾಜದಲ್ಲಿ ಸಮಸ್ಯೆಗಳನ್ನು ಬೆಟ್ಟು ಮಾಡಿತೋರಿಸುವುದು ಹವ್ಯಾಸವಾಗಿದೆ. ಆದರೆ ಪರಿಹಾರೋಪಾಯಗಳನ್ನು ಹೇಳುವುದೇ ಇಲ್ಲ. ಹಿಂದೂ ಧರ್ಮದ ಅಪಪ್ರಚಾರಗಳಿಗೆ ಸೂಕ್ತವಾಗಿ ಉತ್ತರ ನೀಡುವ ವಿದ್ವಾಂಸರ ಪಡೆಯನ್ನು ರೂಪಿಸಬೇಕು. ಅಭಿನವ ಶಂಕರ ಭಾರತೀ ಮಹಾಸ್ವಾಮೀಜಿ, ಕೂಡಲಿ ಶಂಕರ ಮಠ.