20ರಂದು ಸಂತಕವಿ ಸರ್ವಜ್ಞ ಜಯಂತಿ ಆಚರಣೆ

CTD 9 SARVNGA-04
Published on

ಚಿತ್ರದುರ್ಗ: ತ್ರಿಪದಿ ಕವಿ ಎಂದೇ ಪ್ರಸಿದ್ಧಿಯಾದ ಸಂತ ಕವಿ ಸರ್ವಜ್ಞ ಅವರ ಜಯಂತಿಯನ್ನು ಫೆ.20ರಂದು ಅರ್ಥಪೂರ್ಣವಾಗಿ ಅಚರಿಸಲಾಗು ವುದು ಎಂದು ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರು ಹೇಳಿದರು.

ಎಸಿ ಕಚೇರಿಯಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ತರಾಸು ರಂಗಮಂದಿರದಲ್ಲಿ ಅಂದು ಬೆಳೆಗ್ಗೆ 11 ಗಂಟೆಗೆ ವೇದಿಕೆ ಕಾರ‌್ಯಕ್ರಮ ಏರ್ಪಡಿಸಲಾಗಿದೆ ಎಂದರು. ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಕಾರ‌್ಯದರ್ಶಿ ವೈ.ಮೃತ್ಯಂ ಜಯ ಅವರು ಮಾತನಾಡಿ,ಅಂದು ಬೆಳಗ್ಗೆ 9 ಗಂಟೆಗೆ ನಗರದ

ಹೊಳಲ್ಕೆರೆ ರಸ್ತೆ ಮಾರಮ್ಮನ ದೇವಸ್ಥಾನದ ಕುಂಬಾರ ಬೀದಿಯಿಂದ ರಂಗ ಮಂದಿರದವರೆಗೆ ಕಲಾ ತಂಡಗಳೊಂದಿಗೆ ಸರ್ವಜ್ಞರ ಭಾವ ಚಿತ್ರದ ಮೆರವಣಿಗೆ ನಡೆಯಲಿದೆ.

ವೇದಿಕೆ ಕಾರ‌್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ನಿವೃತ್ತ ಉಪನ್ಯಾಸಕ ಕೆ.ಸಿದ್ದಪ್ಪ ಉಪನ್ಯಾಸ ನೀಡುತ್ತಾರೆ. ಕುಂಬಾರ ಮಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ,ಕಬೀರಾನಂದ ಆಶ್ರಮದ ಶ್ರೀ ಶಿವ ಲಿಂಗಾನಂದ ಸ್ವಾಮೀಜಿ ಹಾಗೂ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ ಎಂದರು.

ಎಎಸ್‌ಪಿ ಕುಮಾರಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ಕೆ ಮಲ್ಲಿಕಾರ್ಜುನ,ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಯರ‌್ರಿಸ್ವಾಮಿ,ಮಹಿಳಾ ಸಂಘದ ಅಧ್ಯಕ್ಷೆ ಬೈಲಮ್ಮ,ಗೌರವ ಅಧ್ಯಕ್ಷೆ ಸುನಂದಮ್ಮ,ಹೇಮಾವತಿ,ಕೆ.ಟಿ ರಮೇಶ್,ಅನ್ನಪೂರ್ಣ,ಎಸ್.ನಾರಾಯಣ,ಪ್ರಭು,ಅಂಜಿನಪ್ಪ,ಉಮೇಶ್ ಇತರರು ಇದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net