

ಕಾರವಾರ: ಬಿಣಗಾದ ಮಹಾ ನಾಯಕ ತಾಂಡಾ ಸಮಿತಿಯಿಂದ ಫೆ.23 ರಂದು ಸಂತ ಸೇವಾಲಾಲ ಮಹಾರಾಜರ 286 ನೇ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ತಾಂಡಾದ ಸಂಚಾಲಕ ಅನಿಲಕುಮಾರ್ ಪವಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಣಗಾ ವ್ಯಾಪ್ತಿಯಲ್ಲಿ 45 ವರ್ಷಗಳಿಂದ 30 ಕುಟುಂಬಗಳು ವಾಸಿಸುತ್ತಿವೆ. ಎಲ್ಲರೂ ಸೇರಿ ಜಾತ್ರೆ, ಬಂಜಾರ ಸಮುದಾಯದ ಲಮಾಣಿ ಡ್ಯಾನ್ಸ್ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮಗಳು ನಡೆಯಲಿವೆ. ಸಾಧನೆ ಮಾಡಿದವರನ್ನು ಸನ್ಮಾನಿಸುವ ಜತೆ ತಾಂಡಾದ ಸಮಸ್ಯೆಗಳನ್ನು ಪ್ರಮುಖರ ಬಳಿ ಹಂಚಿಕೊಳ್ಳಲಿದ್ದೆವೆ ಎಂದರು. ಮಂಜುನಾಥ ರಾಟೋಡ್, ಸಂಕರ ರಾಡೋಡ್, ಸುರೇಶ ನಾಯಕ, ರಾಜೇಂದ್ರ ಅಂಚೆಕರ್, ಡಾ.ಜೆ.ಎಲ್.ರಾಟೋಡ್ ಸುದ್ದಿಗೋಷ್ಠಿಯಲ್ಲಿದ್ದರು.