ಶೋಷಣೆ ವಿರುದ್ಧ ಸೇವಾಲಾಲ್ ಹೋರಾಟ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Sant Sevalal Jayanti Mandya
Published on

ಮಂಡ್ಯ: ಸಂತ ಸೇವಾಲಾಲ್ ಅವರು ಮಾದರಿ ಜೀವನ ನಡೆಸಿದವರು. ಶೋಷಣೆಯ ವಿರುದ್ಧ ಹೋರಾಡಿದ ಇತಿಹಾಸವನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಬಿ.ಟಿ.ಲಲಿತಾನಾಯಕ್ ಬಡಾವಣೆಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಲಂಬಾಣಿ ಬಂಜಾರ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಅವರ 286ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದವರ ಸಂಖ್ಯೆ ಕಡಿಮೆ ಇರಬಹುದು. ಆದರೆ ಸಂತ ಸೇವಾಲಾಲ್ ಅವರ ಹೋರಾಟಗಳು ಎಲ್ಲ ಸಮುದಾಯಕ್ಕೂ ಮೀಸಲಾಗಿದ್ದವು. ಅವರು ಎಲ್ಲರನ್ನೂ ಪ್ರೀತಿಸುತ್ತಿದ್ದರು ಎಂದು ಶ್ಲಾಘಿಸಿದರು.

ಜಮೀನ್ದಾರರು, ಶ್ರೀಮಂತರು ಜಮೀನು ವಿಚಾರದಲ್ಲಿ ಜನರನ್ನು ಶೋಷಣೆ ಮಾಡುತ್ತಿದ್ದ ಕಾಲದಲ್ಲಿ ಹೋರಾಟ ರೂಪಿಸಿದ ಸಂತ ಸೇವಾಲಾಲ್ ಅವರ ನಡೆ ಮರೆಯುವಂತಿಲ್ಲ. ಸಂತ ಸೇವಾಲಾಲ್ ಅವರನ್ನು ಸದಾ ಸ್ಮರಿಸುತ್ತಾ ಅವರ ದಾರಿಯಲ್ಲಿ ನಡೆಯೋಣ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿದರು. ಬಂಜಾರ ಸೇವಾ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಎನ್.ಆರ್.ನಾಯಕ್, ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ್, ಕಾರ್ಯದರ್ಶಿ ರಮೇಶ್, ಸಿದ್ಯಾನಾಯಕ್, ಸಂಘಟನಾ ಕಾರ್ಯದರ್ಶಿ ಕಿರಣ್‌ಕುಮಾರ್ ನಾಯಕ್, ನಗರಸಭೆ ಸದಸ್ಯರಾದ ಪೂರ್ಣಾನಂದ, ಶಿವಲಿಂಗು, ಮುಖಂಡರಾದ ಸಿ.ಸುಂದರ್, ಸಾಮ್ರಾಟ್ ಮಂಜು, ರಾಮದಾಸ್ ನಾಯಕ್, ರಾಮ್‌ನಾಯಕ್, ಧರ್ಮರಾಜ್ ನಾಯಕ್, ಶಿವರಾಜ್, ಜೆ.ಪ್ರಸನ್ನ, ಬಾಲರಾಜ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸಂತ ಸೇವಾಲಾಲ್ ಅವರ ಭಾವಚಿತ್ರವನ್ನು ಬೆಳ್ಳಿ ಸಾರೋಟಿನಲ್ಲಿರಿಸಿ ವಿವಿಧ ಕಲಾತಂಡಗಳ ಜತೆ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net