ಸಂತ ಸೇವಾಲಾಲ್ ಜಯಂತ್ಯುತ್ಸವ

h16-banjara
Published on

ಹುಬ್ಬಳ್ಳಿ: ಬಂಜಾರ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 286 ನೇ ಜಯಂತ್ಯುತ್ಸವ ನಿಮಿತ್ತ ಜೆ.ಸಿ. ನಗರದ ಬಂಜಾರ ಭವನದಲ್ಲಿ ಶನಿವಾರ ಸಂತ ಶ್ರೀ ಸೇವಾಲಾಲ್ ಮಹಾರಾಜರ ಮಹಾಭೋಗ್ ಕಾರ್ಯಕ್ರಮ ನೆರವೇರಿಯಿತು.

ಶಾಸಕ ಮಹೇಶ ಟೆಂಗಿನಕಾಯಿ ಅವರು ಶ್ರೀ ಸೇವಾಲಾಲ್, ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಶಾಸಕರನ್ನು ಬಂಜಾರ ವಿಶೇಷ ಲೆಂಗಿ ನೃತ್ಯದೊಂದಿಗೆ ಸ್ವಾಗತಿಸಿ ನಂತರ ಸನ್ಮಾನಿಸಲಾಯಿತು.

ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಡಾ. ಲಾಲು ಲಮಾಣಿ ಉಪನ್ಯಾಸ ನೀಡಿದರು.

ಹು-ಧಾ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ಆರ್. ವಿಜಯಕುಮಾರ, ರಾಜು ರಜಪೂತ, ಉಮೇಶ ಲಮಾಣಿ, ವಾಸು ಲಮಾಣಿ, ಧೀರೇಂದ್ರ ಪಮ್ಮಾರ, ವೆಂಕಟೇಶ ಪಮ್ಮಾರ, ಗೋವಿಂದ ಪಮ್ಮಾರ, ಹೋಮಣ್ಣ ಶಿವಪ್ಪ, ವೆಂಕಟೇಶ ರಾಥೋಡ, ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಗ್ರೇಡ್ 2 ತಹಸೀಲ್ದಾರ್ ಜಿ.ವಿ. ಪಾಟೀಲ, ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಹೇಮಾವತಿ ನಾಯಕ್, ಇತರರು ಭಾಗವಹಿಸಿದ್ದರು.

ಇದಕ್ಕೂ ಮೊದಲು ಬಂಜಾರ ಭವನದಿಂದ ಸೇವಾಲಾಲ್ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆ ಆರಂಭಗೊಂಡು ಅಂಬೇಡ್ಕರ್ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧ ತಹಸೀಲ್ದಾರ್ ಕಚೇರಿ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net