ಕಂಪ್ಲಿ: ಎರಡು ನೂರು ವರ್ಷಗಳ ಇತಿಹಾಸ ಹೊಂದಿದ ಪಟ್ಟಣ ಸಾಂಗತ್ರಯ ಸಂಸ್ಕೃತ, ವೈದಿಕ ಮತ್ತು ಜ್ಯೋತಿಷ ಪಾಠಶಾಲೆಯಲ್ಲಿ 2025-26ನೇ ಸಾಲಿನ ಸಂಸ್ಕೃತ, ವೈದಿಕ ಮತ್ತು ಜ್ಯೋತಿಷ ಬೋಧನಾ ತರಗತಿಗಳಿಗೆ ಹೆಸರು ನೋಂದಾಯಿಸಲು ಅರ್ಜಿ ಆಹ್ವಾನಿಸಲಾಗಿದೆ.
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ, 16ವರ್ಷ ವಯೋಮಿತಿ ಮೀರಿದ ಜಂಗಮ ವಟುಗಳಿಗೆ ಮಾತ್ರ ಪ್ರವೇಶವಿದ್ದು 2025ರ ಜೂ.10ರೊಳಗೆ ಉಚಿತ ಪ್ರವೇಶಕ್ಕಾಗಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ.
ಮಾಹಿತಿಗೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ(81055 66870), ಅಧ್ಯಕ್ಷ ಇಟಗಿ ಬಸವರಾಜಗೌಡ(70192 66163), ಖಜಾಂಚಿ ಟಿ.ಸುರೇಶಗೌಡ(73488 91305), ಸಂಚಾಲಕ ಅರವಿ ಅಮರೇಶಗೌಡ (99861 34111) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.