ಸಂಸ್ಕೃತ ಪೋಷಣೆಯಲ್ಲಿ ಶಿವಾನಂದಾಶ್ರಮ ಸದಾ ಸಿದ್ಧ

19 KAMPLI 04
ಕಂಪ್ಲಿಯಲ್ಲಿ ಜರುಗಿದ ಲಿಂ.ಓದ್ಸೋ ಕರಿಬಸಯ್ಯನವರ 61ನೇ ಪುಣ್ಯಸ್ಮರಣಾರ್ಥ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜವುಕ ವೀರೇಶಸ್ವಾಮಿ ಹಿರೇಮಠ ಹಾರ‌್ಮೋನಿಯಂ ನುಡಿಸುತ್ತ ಹಾಡಿದರು. ಗಂಗಾವತಿಯ ಮಹ್ಮದ್ ರಿಜ್ವಾನ್ ತಬಲಾಸಾತ್ ನೀಡಿದರು. ಪ್ರಮುಖರಾದ ಗೊಗ್ಗ ಕಾರ್ತೀಕ್, ಟಿ.ಎಚ್.ಎಂ.ಗುರುಮೂರ್ತಿ, ಪಾಠಶಾಲಾ ವಿದ್ಯಾರ್ಥಿಗಳಿದ್ದಾರೆ.
Published on

ಕಂಪ್ಲಿ: ಸಾಹಿತ್ಯ, ಸಂಸ್ಕೃತ ಮತ್ತು ಪುರಾಣ ಪ್ರವಚನಗಳನ್ನು ಪೋಷಿಸುವಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮ ಸದಾ ಮುಂಚೂಣಿಯಲ್ಲಿದೆ ಎಂದು ಗೊಗ್ಗ ಬಸಯ್ಯ ಮಹಾದೇವಮ್ಮ ಸ್ಮಾರಕ ಮಂಗಳಭವನದ ಪ್ರಮುಖ ಗೊಗ್ಗ ಕಾರ್ತೀಕ್ ಹೇಳಿದರು.

ಇಲ್ಲಿನ ಗುರುಮಠದಲ್ಲಿ ಭಾನುವಾರ ಲಿಂ.ಓದ್ಸೋ ಕರಿಬಸಯ್ಯನವರ 61ನೇ ಪುಣ್ಯಸ್ಮರಣಾರ್ಥ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜವುಕ ವೀರೇಶಸ್ವಾಮಿ ಹಿರೇಮಠ ಹಾರ‌್ಮೋನಿಯಂ ನುಡಿಸುವ ಜತೆಗೆ ಶಾಸ್ತ್ರೀಯ ಸಂಗೀತ, ವಚನಗಾಯನ, ದಾಸರ ಪದಗಳು, ತತ್ವಪದಗಳನ್ನು ಹಾಡಿದರು. ಗಂಗಾವತಿಯ ಮಹ್ಮದ್ ರಿಜ್ವಾನ್ ತಬಲಾ ಸಾತ್ ನೀಡಿದರು.

ಪ್ರಮುಖರಾದ ಟಿ.ಎಚ್.ಎಂ.ಗುರುಮೂರ್ತಿ, ಅರವಿ ಬಸವನಗೌಡ, ಕೆ.ಎಂ.ಚಂದ್ರಶೇಖರ ಶಾಸ್ತ್ರಿ, ಎಚ್.ಎಂ.ಜಗದೀಶ, ವಿಶ್ವನಾಥಶಾಸ್ತ್ರಿ, ಯೋಗರಾಜಾಚಾರ್, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಸದಸ್ಯೆಯರಾದ ವಾಲಿಶಾರದಮ್ಮ, ಕಲ್ಗುಡಿ ಬಸಂತಮ್ಮ, ಹಂಪಮ್ಮ, ಎಚ್.ಎಂ.ಶಾಂತಮ್ಮ, ಕೋರಿಶರಣಮ್ಮ, ಸಾಂಗತ್ರಯ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net