

ಶಿರಸಿ: ತಾಲೂಕಿನ ಭೈರುಂಬೆಯ ಭಾರತೀ ಸಂಸ್ಕೃತ ಪಾಠಶಾಲೆಯಲ್ಲಿ ‘ಅಸ್ಮಾಕಂ ಸಂಸ್ಕೃತಮ್’ ಎಂಬ ಸಂಸ್ಕೃತ ಸರಣಿ ಕಾರ್ಯಕ್ರಮ ಸೋಮವಾರ ನಡೆಯಿತು.
ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ ಹಾಗೂ ಕರ್ನಾಟಕ ಸಂಸ್ಕೃತ ನಿರ್ದೇಶನಾಲಯದ ನಿರ್ದೇಶನದಂತೆ ವಿಶೇಷವಾಗಿ ನಡೆಸಲಾಯಿತು. ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ರಾ. ಹೆಗಡೆ ದೇವದಕೇರಿ ಅವರು ಉದ್ಘಾಟಿಸಿ ಸಂಸ್ಕೃತದ ಉಳಿವಿನ ಮಹತ್ವ ವಿವರಿಸಿದರು. ಮುಖ್ಯಾಧ್ಯಾಪಕ ವಿದ್ವಾನ್ ಕೆ.ಎಂ. ಹೆಗಡೆ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನವಾಯಿತು. ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತ ಜಾಥಾ ನಡೆಯಿತು. ’ವಂದೇ ಸಂಸ್ಕೃತ ಮಾತರಂ್’ ಎಂಬ ಘೊಷಣೆಗಳು ಮೊಳಗಿದವು.