

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ 136ನೇ ವಾರ್ಷಿಕೋತ್ಸವ ಸಮಾರಂಭವನ್ನು ಆ. 9ರಂದು ಏರ್ಪಡಿಸಲಾಗಿದೆ.
ಆ. 9ರಂದು ಸಂಜೆ 6 ಗಂಟೆಗೆ ಪಾಠ ಶಾಲೆ ಆವರಣದಲ್ಲಿ ಬೀದರನ ಶ್ರೀ ಸದ್ಗುರು ಜ್ಞಾನರಾಜ ಮಹಾರಾಜರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಾರ್ಷಿಕೋತ್ಸವ ನಿಮಿತ್ತ ಆ. 7ಹಾಗೂ 8ರಂದು ವೇದ, ಸಾಹಿತ್ಯ, ಶಾಸ್ತ್ರಗಳ ಪರೀಕ್ಷೆಗಳು ನಡೆಯಲಿವೆ. ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪಾಠಶಾಲಾ ಪ್ರಕಟಣೆ ತಿಳಿಸಿದೆ.