

ಬದಿಯಡ್ಕ: ಕೇರಳದಲ್ಲಿ ಕೆಲವು ದಿನದ ಹಿಂದೆ ನಡೆದ ಓಣಂ ಪೂರ್ವ ಪರೀಕ್ಷೆ ಪ್ರಶ್ನೆಪತ್ರಿಕೆಯೊಂದರಲ್ಲಿ ಏಕೈಕ ಸಂಸ್ಕೃತ ವಾರಪತ್ರಿಕೆ ಸುಧರ್ಮ ಉಲ್ಲೇಖಗೊಂಡು ಗಮನ ಸೆಳೆದಿದೆ.
ಹಿರಿಯ ಪ್ರಾಥಮಿಕದ 6ನೇ ತರಗತಿಗೆ ಸೋಮವಾರ ನಡೆದ ಸಂಸ್ಕೃತ ಪರೀಕ್ಷೆ ಪ್ರಶ್ನೆಪತ್ರಿಕೆ ಮೊದಲ ಪುಟದಲ್ಲಿ ಪ್ರಥಮ ಪ್ರಶ್ನೆಯ ಭಾಗವಾಗಿ ಸುಧರ್ಮದ ಶೀರ್ಷಿಕೆ ಪುಟದ ಚಿತ್ರದೊಂದಿಗೆ ವಿಶ್ವಕಪ್ ಕ್ರಿಕೆಟ್‌ನ ಪ್ರಶ್ನೆಗಳನ್ನು ಉಲ್ಲೇಖಿಸಲಾಗಿದೆ.
ಸುಧರ್ಮ ಪತ್ರಿಕೆಯಲ್ಲಿ ಬಂದ ವರದಿ ಇಲ್ಲಿ ಬಳಸಿದ್ದು, ಐದು ಅಂಕಗಳ ಪ್ರಶ್ನೆ ಕೇಳಲಾಗಿತ್ತು. ಸುಧರ್ಮ ವಾರಪತ್ರಿಕೆ ಭಾರತದಲ್ಲಿ ನಿಯಮಿತವಾಗಿ ಪ್ರಕಟಗೊಳ್ಳುತ್ತಿರುವ ಏಕೈಕ ಸಂಸ್ಕೃತ ಪತ್ರಿಕೆಯಾಗಿದ್ದು, ಮೈಸೂರಿನಿಂದ ಪ್ರಕಟಗೊಳ್ಳುತ್ತಿದೆ.