ಸಂಸ್ಕೃತ ಭಾಷೆ ಜ್ಞಾನ ಭಂಡಾರ

New KSLU New
Published on

ಹುಬ್ಬಳ್ಳಿ : ಸಂಸ್ಕೃತವನ್ನು ಒಂದು ಭಾಷೆಯಾಗಿ ಸೀಮಿತಗೊಳಿಸದೇ, ಅದನ್ನು ಒಂದು ಜ್ಞಾನ ಭಂಡಾರದ ವಿಶೇಷ ವಸ್ತುವಾಗಿ ಪರಿಗಣಿಸಬೇಕು ಎಂದು ಸಂಸ್ಕೃತಿ ಭಾರತಿ ಸಂಸ್ಥೆಯ ಪೂರ್ಣಾವಧಿ ಕಾರ್ಯಕರ್ತ ಡಾ. ಸಚಿನ ಕಥಾಳೆ ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಕೃತ ಭಾಷೆಗೆ ಮಿತಿಗಳಿಲ್ಲ. ಅದರ ವ್ಯಾಪ್ತಿ ಅಗಾಧವಾದದ್ದು. ಅದೊಂದು ಜ್ಞಾನ ಭಂಡಾರ. ಸಂಸ್ಕೃತ ಭಾಷೆ ಅರಿಯುವುದರಿಂದ ಸಾಕಷ್ಟು ಜ್ಞಾನ ಲಭಿಸುತ್ತದೆ ಎಂದರು.

ಅತಿಥಿಯಾಗಿದ್ದ ಲಕ್ಷ್ಮೀ ನಾರಾಯಣ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ಸಂಸ್ಕೃತ ಭಾಷೆಯ ಮಹತ್ವ ಮತ್ತು ಅದನ್ನು ಕಲಿಯುವುದರಿಂದ ದೊರೆಯುವ ಅನುಕೂಲತೆಗಳನ್ನು ತಿಳಿಸಿದರು.

ಕುಲಸಚಿವ ಪ್ರೊ. ರತ್ನಾ ಆರ್. ಭರಮಗೌಡರ, ಸಂಯೋಜಕ ಡಾ. ಅನುಪ್ರಸನ್ನನ್, ಡಾ. ಸಹಾಯಕ ಪ್ರಾಧ್ಯಾಪಕ ರಾಜೇಂದ್ರಕುಮಾರ ಹಿಟ್ಟಣಗಿ, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net