

ನಾಗಮಂಗಲ : ಸಂಸ್ಕೃತ ಭಾಷೆ ಉಳಿದೆಲ್ಲಾ ಭಾಷೆಗಳಿಗೆ ತಾಯಿ ಭಾಷೆಯಾಗಿರುವುದು ಮಾತ್ರವಲ್ಲದೆ ದೇವಭಾಷೆಯಾಗಿದೆ ಎಂದು ಮಾದರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಹೇಳಿದರು.
ಪಟ್ಟಣದ ಶ್ರೀವಾಣಿ ಭೂಷಣ ಸಂಸ್ಕೃತ ಪಾಠಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಭಾಷೆಯ ಪದಗಳು ಎಲ್ಲ ಭಾಷೆಗಳಲ್ಲಿ ಅಡಕವಾಗಿವೆ. ಇದರಿಂದಲೇ ಅರಿಯಬಹುದಾಗಿದೆ ಸಂಸ್ಕೃತ ಎಲ್ಲ ಭಾಷೆಗಳಿಗೂ ಮೂಲ ಬೇರು ಎಂಬುದನ್ನು. ಸರಳವಾದ ಸಂಸ್ಕೃತ ಭಾಷೆಯ ಅಧ್ಯಯನದಿಂದ ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಮತ್ತು ಸದ್ಗುಣಗಳನ್ನು ಕಾಣಬಹುದಾಗಿದೆ ಎಂದರು.
ವಿದ್ಯಾರ್ಥಿಗಳು ಸಂಸ್ಕೃತ ಗೀತೆಗೆ ನೃತ್ಯಪ್ರದರ್ಶನ ಮಾಡಿದರು ಹಾಗೂ ಮಹಾಭಾರತ ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಹಾಡಿದರು.ಮುಖ್ಯಶಿಕ್ಷಕ ಚನ್ನೇಗೌಡ, ನರಸಿಂಹಭಟ್ಟ, ಮುಖಬುಲ್ ಜಾನ್, ರಾಮಕೃಷ್ಣೇಗೌಡ, ಸುಜಾತಾ, ರತ್ನಮ್ಮ, ಉಷಾರಾಣಿ ಇದ್ದರು.