

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಸ್ಕೃತ ಭಾಷೆ ಉಳಿದೆಲ್ಲ ಭಾಷೆಗಳಿಗೆ ತಾಯಿ ಭಾಷೆಯಾಗಿರುವುದಲ್ಲದೆ, ದೇವಭಾಷೆಯಾಗಿದೆ ಎಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅಽÃಕ್ಷಕ ಶಿವಲಿಂಗ .ಸಿ. ನೀಲಗುಂದ ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ನಗರದ ದೇವಿ ಸಂಸ್ಕೃತ ಪಾಠಶಾಲೆ ಮತ್ತು ಎಲ್‌ಇಎ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಇಲ್ಲಿನ ಟೌನ್‌ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಅಸ್ಮಾಕಂ ಸಂಸ್ಕೃತA' 2ನೇ ಸರಣಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಲಯ ಸಂಯೋಜಕ ಬಿ.ಬಿ. ಆರೇರ ಸಂಸ್ಕೃತ ಭಾಷೆ ಬಗ್ಗೆ ಉಪನ್ಯಾಸ ನೀಡಿದರು. ಎಲ್‌ಇಎ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಡಿ.ಬಿ. ಹೊಂಬಳ, ಸಿಆರ್‌ಪಿ ರೇಣುಕಾ ಜಗ್ಗಲ, ದೇವಿ ಸಂಸ್ಕೃತ ಪಾಠಶಾಲಾ ಮುಖ್ಯಾಧ್ಯಾಪಕ ಎ.ಎಸ್. ಮಡಿವಾಳರ ಮಾತನಾಡಿದರು.
ವಿದ್ಯಾರ್ಥಿಗಳಿಂದ ಪ್ರಾರ್ಥನಾಗೀತೆ, ಭರತನಾಟ್ಯ, ಭಗವದ್ಗೀತೆ ಪಠಣ, ಸಂಸ್ಕೃತಸ್ತೋತ್ರ ಪಠಣ ನಡೆದವು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ಜಾಥಾ ಹೊರಟು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಎಸ್.ವಿ. ಯರಗಟ್ಟಿ, ಎಸ್.ಎಂ. ಕರೆತ್ತಿನ, ಇತರರಿದ್ದರು. ಎಂ.ಜಿ. ಲತಾ ಸ್ವಾಗತಿಸಿದರು. ಎಂ.ಆರ್. ಪಾಗೋಜಿ ನಿರೂಪಿಸಿದರು. ಎಸ್.ಎಂ. ಹೂಗಾರ ವಂದಿಸಿದರು.